ಅಧಿಕಾರಿಗಳ ಕಾರ್ಯಕ್ಕೆ ಮೂವರು ಸಚಿವರುಗರಂ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.06- ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಪೌರಾಡಳಿತ ಸಚಿವರ ಹೀಂಖಾನ್‍ಜಿಪಂ ಸಭಾಂಗಣದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕೆಯುಐಡಿಎಫ್‍ಸಿ ಹಾಗೂ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಆರಂಭದಿಂದಲೇ ಅಧಿಕಾರಿಗಳಕಾರ್ಯ ವೈಖರಿಗೆ ಕೆಂಡಾಮಂಡಲರಾದ ಸಚಿವರು ನಗರಸಭೆ, ನಗರಮತ್ತು ಗ್ರಾಮಾಂತರ ಯೋಜನೆ ಅಧಿಕಾರಿಗಳು ಹಾಗೂ ಒಳಚರಂಡಿ ಇಲಾಖೆಗೆ ಅಧಿಕಾರಿಗಳಿಗೆ ಬೆವರಿಳಿಸಿದರು.
ಸಭೆಗೆ ಗೈರಾಗಿದ್ದ ಚಾಮರಾಜನಗರ ನಗರಸಭೆ ಎಇಇ ನಟರಾಜು ಅವರನ್ನು ಅಮಾನತು ಮಾಡುವಂತೆ ಸಚಿವ ಸುರೇಶ್ ಡಿಸಿ ಶಿಲ್ಪಾನಾಗ್‍ಗೆ ಸೂಚನೆ ಕೊಟ್ಟರು. ಬಳಿಕ, ಚಾಮರಾಜನಗರ ನಗರಸಭೆ ಆಯುಕ್ತ ರಾಮದಾಸ್, ನಗರಯೋಜನೆ ಅಧಿಕಾರಿರೇಣುಕಾ ಅವರು ಕರ್ತವ್ಯನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ದೂರುಗಳು ಕೇಳಿಬಂದಿದ್ದರಿಂದ, ಶಾಸಕರು ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆಂದು ಹರಿಹಾಯ್ದದ್ದರಿಂದ ಇವರಿಬ್ಬರನ್ನೂ ಬೇರೆಡೆವರ್ಗಾವಣೆಮಾಡಿ ಎಂದು ಇಲಾಖೆ ಆಯುಕ್ತರಿಗೆ ಬೈರತಿ ಸೂಚನೆ ಕೊಟ್ಟರು.
ಚಾಮರಾಜನಗರಯೋಜನಾ ಅಧಿಕಾರಿಗಳು ಬಂದ ಅನುದಾನವನ್ನು ಬಳಸಿಕೊಳ್ಳದೇ ವಾಪಾಸ್‍ಆದ ಮಾಹಿತಿ ಪಡೆದ ಸಚಿವ ವೆಂಕಟೇಶ್‍ಗರಂ ಆದರು. ದುಡ್ಡುಕೊಟ್ಟರೂ ಕೆಲಸ ಮಾಡದೇ ವಾಪಸ್ ಹೋಗಿದೆ, ನೀವೆಲ್ಲಾ ಅಧಿಕಾರಿಗಳಾಗಿ ಯಾಕೆ ಇರ್ತಿರಾ, 6 ತಿಂಗಳಾದರೂ ಯಾವ ಕೆಲಸವೂ ಪ್ರಗತಿಯಲ್ಲಿಇಲ್ಲವಲ್ಲಾ ಎಂದು ಛೀಮಾರಿ ಹಾಕಿದರು. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಶೇ.50 ಒಳಚರಂಡಿ ವ್ಯವಸ್ಥೆ ಹಾಗೂ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶೇ.75ರಷ್ಟು ಯುಜಿಡಿ ವ್ಯವಸ್ಥೆಇಲ್ಲದಿರುವುದನ್ನು ತಿಳಿದು ಕೂಡಲೇ ಅಂದಾಜು ಪಟ್ಟಿ ಕಳುಹಿಸಿ ಹಣಕೊಡುತ್ತೇನೆ ಎಂದು ಸುರೇಶ್ ಭರವಸೆಕೊಟ್ಟರು.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಲೇಔಟ್‍ಗಳನ್ನುಮಾಡಿ, ಚುಡಾದ ಮಾಸ್ಟರ್‍ಪ್ಲಾನ್‍ಗೆ ಎರಡು ದಿನದಲ್ಲಿ ಅನುಮೋದನೆ ಕೊಡಿಸುತ್ತೇನೆ ಎಂದು ಸುರೇಶ್ ತಿಳಿಸಿದರು. ಇದೇವೇಳೆ, ಎ ಖಾತಾ ಮತ್ತು ಬಿಖಾತಾ ಮಾಡಲು ಮತ್ತೊಂದು ಅವಕಾಶಕೊಡಲಿದ್ದು, ಈ ಬಾರಿ ಅಧಿವೇಶನದಲ್ಲಿ ಮಸೂದೆಮಂಡನೆ ಆಗಲಿದೆ. ಒಂದು ನಿರ್ಧಿಷ್ಟ ಸಮಯದ ಅವಕಾಶ ಕೊಟ್ಟು ಎ ಮತ್ತು ಬಿ ಖಾತಾಮಾಡಿಸಿಕೊಳ್ಳಲು ಅವಕಾಶನೀಡುತ್ತೇವೆ ಎಂದು ಸಭೆಗೆ ಸಚಿವ ಸುರೇಶ್ ಮಾಹಿತಿ ನೀಡಿದರು.
ಪೌರಾಡಳಿತ ಸಚಿವ ರಹೀಂಖಾನ್ ಮಾತನಾಡಿ, ಹೊಸದಾಗಿ 151 ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು. ಕ್ಯಾಂಟಿನ್‍ಅನ್ನು ಮತ್ತಷ್ಟು ಸಶಕ್ತಗೊಳಿಸಲು, ಜನರಿಗೆ ಬಗೆಬಗೆಯ ಆಹಾರ ಕೊಡಲು ಪ್ರದೇಶವಾರು ಮೆನು ಬದಲಿಸಲಾಗಿದೆ ಎಂದರು. ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣೇಶ್ ಪ್ರಸಾದ್ ಇದ್ದರು.