ಕಾಲೇಜು ಉಪನ್ಯಾಸಕರುಗಳಿಗೆ ಸಾಮಾನ್ಯ ಮಾಹಿತಿ ಶಿಬಿರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.06-ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್, ಕರ್ನಾಟಕರಾಜ್ಯ ಸಂಸ್ಥೆ ಹಾಗೂ ಚಾಮರಾಜನಗರಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಚಾಮರಾಜನಗರದಲ್ಲಿ ಸಾಮಾನ್ಯ ಮಾಹಿತಿ ಶಿಬಿರ ಹಾಗೂ ಕಾಲೇಜು ಉಪನ್ಯಾಸಕರುಗಳಿಗೆ ಪ್ರಾರಂಭಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಹಾಗೂ ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್‍ಜಿಲ್ಲಾ ಮುಖ್ಯಆಯುಕ್ತರುರಾಮಚಂದ್ರರಾಜೇಅರಸ್, ಚಾಮರಾಜನಗರಇವರಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್‍ರಾಜ್ಯ ಮುಖ್ಯಆಯುಕ್ತರುಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಗಾರದಲ್ಲಿ ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಚಳುವಳಿಯ ಕಾರ್ಯಕ್ರಮಗಳು, ಚಟುವಟಿಕೆಗಳು, ತರಬೇತಿಗಳು, ಯುವಜನಾಂಗದ ಸವಾರ್ಂಗೀಣಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಯಸ್ಕರ ಸಂಪನ್ಮೂಲರಾಜ್ಯಆಯುಕ್ತಸಿ.ಎಸ್.ರೆಡ್ಡಿ ಸಭೆಯಲ್ಲಿಅಗತ್ಯ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್‍ಜಿಲ್ಲಾಆಯುಕ್ತರಾದ (ಗೈಡ್) ಡಾ|| ಶ್ವೇತಾ ಶಶಿಧರ್, ಜಿಲ್ಲಾಉಪಾಧ್ಯಕ್ಷಅಶ್ವಥ್‍ನಾರಾಯಣ್,ಜಿಲ್ಲಾ ಕಾರ್ಯದರ್ಶಿ ಎಂ.ರಾಮಚಂದ್ರ, ಜಿಲ್ಲೆಯಎಲ್ಲ ಪದಾಧಿಕಾರಿಗಳು,ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮುಖ್ಯಆಯುಕ್ತರು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಉತ್ತಮ ಸಲಹೆ, ಸಹಕಾರ ಮತ್ತು ಮಾರ್ಗದರ್ಶನವನ್ನು ನೀಡಿಕಾರ್ಯಗಾರವನ್ನು ಯಶಸ್ವಿಗೊಳಿಸಿದರು.