ವೈದ್ಯಕೀಯ ಸೇವೆಗೆ ಸೌಲಭ್ಯ ಕೊರತೆಯ ತಾಂಬಾ ಸರಕಾರಿ ಆಸ್ಪತ್ರೆ
ಇಂಡಿ:ಜು.6: ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಆಸ್ಪತ್ರೆ ಉತ್ತಮವಾದ ಕಟ್ಟಡ ಹೊಂದಿದೆ. ಸರಕಾರ ಲಕ್ಷಾಂತರ ರೂ ಖರ್ಚು ಮಾಡಿ ಜನರಿಗೆ ಆರೋಗ್ಯ ಸಿಗಲೆಂದು ಖರ್ಚು ಮಾಡಿದೆ. ದುಡಿಯುವ ವರ್ಗ ಇದೆ. ಸಿಬ್ಬಂದಿ ಇದೆ. ವೈದ್ಯರಿದ್ದಾರೆ. ಕಳೆದ ಒಂದು ವರ್ಷದಿಂದ ಸೌಲಭ್ಯದ ಕೊರತೆಯಿಂದ ಧೂಳು ತಿನ್ನುತ್ತಿದೆ.
ಇಲ್ಲಿ ಎರಡು ವೈದ್ಯರ ಹುದ್ದೆ ಮಂಜುರಾತಿ ಇದೆ. ಒಂದು ಹುದ್ದೆ ಎಂ.ಬಿ.ಬಿ.ಎಸ್ ಮತ್ತೊಂದು ಬಿ.ಎ.ಎಂ.ಎಸ್. ತಾಂಬಾ ಗ್ರಾಮ ಇಂಡಿ ತಾಲೂಕಿನ ಅತ್ಯಂತ ದೊಡ್ಡ ಗ್ರಾಮ. ಇಲ್ಲಿ 39 ಗ್ರಾ.ಪಂ ಸದಸ್ಯರ ಗ್ರಾ.ಪಂ ಹೊಂದಿದೆ.
ಇಲ್ಲಿ ಎಂ.ಬಿ.ಬಿಎಸ್ ವೈದ್ಯರಿದ್ದಾರೆ. ಅವರು ತಾಂಬಾದಲ್ಲಿಯೇ ಇರಲು ಮನೆಯ ವ್ಯವಸ್ಥೆ ಇದೆ. ವೈದ್ಯರು ಹಲವಾರು ಬಾರಿ ವಿನಂತಿಸಿಕೊಂಡರೂ ಸ್ವಚ್ಛತೆ ಮಾಡಿ ಕೊಡುತ್ತಿಲ್ಲ. ಹೀಗಾಗಿ ಅವರು ವಿಜಯಪುರಕ್ಕೆ ಹೋಗಿ ಬಂದು ಮಾಡುತ್ತಾರೆ. ರಾತ್ರಿ ಹೊತ್ತು ಆಸ್ಪತ್ರೆಯಲ್ಲಿ ಉಳಿದ ರೋಗಿಗಳ ಕಾರುಬಾರು.
ಇಲ್ಲಿ ರೋಗಿಗಳಿಗೆ ತರಲು ಅಂಬ್ಯಲನ್ಸ ಸೇವೆ ಇತ್ತು. ಅದನ್ನು ಇಂಡಿ ತಾಲೂಕಿನ ಅಥರ್ಗಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕಳೆದ ಅನೇಕ ದಿನಗಳಿಂದ ನಾಯಿ ಕಡಿದ ಪ್ರಕರಣಗಳು ಬಂದಿವೆ. ಆದರೆ ಇಲ್ಲಿ ನಾಯಿ ಕಡಿದರೆ ಅದಕ್ಕೆ ಆಸ್ಪತ್ರೆಯಲ್ಲಿ ಔಷದವೇ ಇಲ್ಲ ಎಂದು ಹೇಳುತ್ತಾರೆ.
ಸರಿಯಾದ ಗುಳಿಗೆಗಳಿಲ್ಲ. ಔಷದ ನೀಡುವ ಸಿಬ್ಬಂದಿಯಿಲ್ಲ. ಕೆಲಸ ಮಾಡುವ ಸಿಬ್ಬಂದಿ ಬರುವದೇ ಇಲ್ಲ.
ಕಳೆದ ವರ್ಷದ ಸಿಂದಗಿ ಉಪ ಚುನಾವಣೆಯಲ್ಲಿ ತಾಂಬಾ ಆಸ್ಪತ್ರೆ ಸುಧಾರಣೆಗಾಗಿ ಗ್ರಾಮಸ್ಥರು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ, ದೇವೆಗೌಡ,ಕುಮಾರಸ್ವಾಮಿ,ಸಿದ್ದರಾಮಯ್ಯ,ಯಡೆಯೂರಪ್ಪ ಸೇರಿದಂತೆ ಎಲ್ಲ ರಾಜಕೀಯ ಧುರೀಣರಿಗೆ ವಿನಂತಿಸಿದರು. ಆದರೂ ಉಪಚುನಾವಣೆ ಮುಗಿಯಿತು. ದವಾಖಾನೆ ಮಾತ್ರ ಪ್ರಗತಿ ಕಾಣಲಿಲ್ಲ.
ರಾತ್ರಿ ಹೊತ್ತಿನಲ್ಲಿ ಹೆರಿಗೆಗೆ ತಾಂಬಾ ಮತ್ತು ಸುತ್ತಲಿನ ಗ್ರಾಮಸ್ಥರು ವಿಜಯಪೂರಕ್ಕೆ ಹೋಗುವದು ಒಂದೇ ದಾರಿ. ಶ್ರೀಮಂತರು ಹೇಗಾದರೂ ಮಾಡಬಹುದು. ಬಡವರು ಏನೂ ಮಾಡಬೇಕು ಎಂಬುದು ಗ್ರಾಮಸ್ಥರು ಎಲ್ಲರಲ್ಲಿಯೂ ವಿನಂತಿಸುತ್ತಾರೆ. ಆದರೆ ಪ್ರಗತಿ ಮಾತ್ರ ಸೊನ್ನೆ.
ಇಲಾಖೆ ತಾಲೂಕಿನ,ಜಿಲ್ಲೆಯ,ರಾಜ್ಯದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಗತಿ ಕಂಡಿಲ್ಲ.
ಈಗಾಗಲೇ ತಾಂಬಾ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಆರೋಗ್ಯ ಸಚಿವರಿಗೆ ಮತ್ತು ಸಂಬಂದಿತ ಅಧಿಕಾರಿಗಳಿಗೆ ಶಾಸಕ ಮನಗೂಳಿಯವರು ಪತ್ರ ಬರೆದಿದ್ದಾರೆ.
ಕೋಟ್ –
ತಾಂಬಾ ಗ್ರಾಮದಲ್ಲಿ ಗುತ್ತಿ ಬಸವಣ್ಣ ನೀರಿಗಾಗಿ 450 ದಿವಸ ಹೋರಾಟ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ಸೌಲಭ್ಯ ಸರಿಯಾಗಿ ಒದಗಿಸದಿದ್ದರೆ ಹೋರಾಟ ಅನಿವಾರ್ಯ
ಮಲ್ಲಯ್ಯ ಸಾರಂಗಮಠ ಗುತ್ತಿ ಬಸವಣ್ಣ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ತಾಂಬಾ.
ತಾಂಬಾ ಗ್ರಾಮದ ಆಸ್ಪತ್ರೆ ಕುರಿತು ಆರೋಗ್ಯ ಸಚಿವ ಮತ್ತು ಆಯುಕ್ತ ಜೊತೆಗೆ ಮಾತನಾಡಿದ್ದು ಕ್ರಮ ಕೈ ಕೊಳ್ಳುವ ಭರವಸೆ ನೀಡಿದ್ದಾರೆ
ಅಶೋಕ ಮನಗೂಳಿ ಶಾಸಕರು ಸಿಂದಗಿ