ಇಂಗ್ಲೀಷ್ ನಮ್ಮಲ್ಲಿರುವ ಜಾತಿ ಪದ್ಧತಿ ತೊಡೆದು ಹಾಕಲು ಸುಲಭಗೊಳಿಸಿತು.
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜು.೬; ಭಾಷೆಗಳು ಒಂದರಿಂದ ಒಂದು ದತ್ತು ಪಡೆದುಕೊಂಡು ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ, ಮಾತೃಭಾಷೆ ಕನ್ನಡ ಸಹ ಸಾಕಷ್ಟು ಇನ್ನಿತರ ಭಾಷೆಗಳಿಂದ ಪದಸಂಪತ್ತುಗಳನ್ನ ಪಡೆದುಕೊಂಡು ಸಮೃದ್ಧವಾಗಿದೆ, ಮಾತೃ ಮಾತೃಭಾಷೆಯ ಬಗ್ಗೆ ಅಭಿಮಾನವಿಟ್ಟುಕೊಂಡು ಇನ್ನಿತರ ಭಾಷೆಗಳನ್ನುಕಲಿಯಬಹುದು. ಭಾಷೆಗಳ ಮಧ್ಯೆ ಗೊಂದಲ ಪಡೆದೆ ಎಲ್ಲಾ ಭಾಷೆಗಳಲ್ಲೂ ಸತ್ವವಿದೆ, ಎಲ್ಲವೂ ಸಹ ಇನ್ನಿತರ ಭಾಷೆಗಳಿಂದ ಪದಗಳನ್ನು ಪಡೆದೆ ಸಮೃದ್ಧವಾಗಿರುತ್ತವೆ, ಯಾವುದೇ ಭಾಷೆಯನ್ನು ನಾವು ನಾಶ ಮಾಡಲು ಸಾಧ್ಯವಾಗುವುದಿಲ್ಲ ಎಂದು ಇಂಗ್ಲೀಷ್ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ ಎಂ. ವಿ. ನಾಗರಾಜ್ ಹೇಳಿದರು.ಅವರು ಸರ್ಕಾರಿ ವಿಜ್ಞಾನ ಕಾಲೇಜ್ ಕ್ಯಾದಿಗೆರೆಯಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಸೇವಾ ಯೋಜನಾ ವಿಶೇಷ ಶಿಬಿರದಲ್ಲಿ ಕನ್ನಡ ಇಂಗ್ಲಿಷ್ ಅನುಸಂಧಾನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.ಇಂಗ್ಲೀಷ್ ಭಾಷೆ ಬಂದಾಗ ನಮ್ಮಲ್ಲಿರುವ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಸುಲಭಗೊಳಿಸಿತು, ಕನ್ನಡ ಭಾಷೆಗೆ ಸಾಕಷ್ಟು ಇಂಗ್ಲಿಷ್ ಪದದ ಸಂಪತ್ತುಗಳು ಸೇರ್ಪಡೆಯಾಗಿವೆ, ಅದೇ ರೀತಿ ಇಂಗ್ಲಿಷು ಸಹ ಕನ್ನಡದ ಕೆಲವು ಪದಗಳನ್ನು ಸೇರ್ಪಡೆ ಮಾಡಿಕೊಂಡು ಪ್ರಬುದ್ಧವಾಗಿದೆ. ವಿಜ್ಞಾನದ ಬೋಧನೆಗೆ ಇಂಗ್ಲಿಷ ಸಹಕಾರಿಯಾಗಿದೆ ಎಂದರು.ವಿಜ್ಞಾನ ಕೇಂದ್ರದ ಶಿಕ್ಷಕರಾದ ಚಂದ್ರಪ್ಪ ಪವಾಡ ಬಯಲು ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾ ಜನರು ವೈಜ್ಞಾನಿಕವಾಗಿ ಚಿಂತಿಸಬೇಕು, ಮೋಸ ವಂಚನೆಗಳಿಗೆ ಬಲಿಯಾಗದೆ ಪ್ರಶ್ನಿಸಬೇಕು, ವಿಜ್ಞಾನದ ವಿಚಾರಗಳನ್ನ ನೆನಪಿನಲ್ಲಿಟ್ಟುಕೊಂಡು ಮೂಢನಂಬಿಕೆಗಳನ್ನು ತೊಲಗಿಸಬೇಕು, ಮೋಸ ಮಾಡುವ ಬಲೆಗೆ ಬೀಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಸಾಕಷ್ಟು ಪವಾಡಗಳನ್ನ ಪ್ರಾತ್ಯಕ್ಷ್ಷಿಕವಾಗಿ ತೋರಿಸಿಕೊಟ್ಟರು.ವಿಜ್ಞಾನ ಕೇಂದ್ರದ ಶ್ರೀ ದಾಸೇಗೌಡರು ಮಕ್ಕಳ ಮನಸ್ಸಿನಲ್ಲಿ ವೈಜ್ಞಾನಿಕ ಚಿಂತನೆಗಳನ್ನ ಬಿತ್ತಬೇಕು, ಪ್ರಶ್ನೆ ಮಾಡುವ ಮತ್ತು ವೈಚಾರಿಕ ಚಿಂತನೆಗಳನ್ನ ಅಳವಡಿಸಿಕೊಳ್ಳಬೇಕು, ಮನುಷ್ಯನ ಮನಸ್ಸಿನ ಮೂಲಕ ಸಾಕಷ್ಟು ಜಾದುಗಾರರು ಪವಾಡ ಮಾಡುವರು ಜನರನ್ನ ಮೋಸಗೊಳಿಸುತ್ತಿರುತ್ತಾರೆ, ಅದರ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ನುಡಿದರು.ನಿವೃತ್ತ ದ್ವಿತೀಯ ದರ್ಜೆ ಸಹಾಯಕರಾದ  ಎ ಮಂಜುನಾಥ್ ಅಧ್ಯಕ್ಷತೆ ಭಾಷಣ ಮಾಡುತ್ತಾ ಎನ್‌ಎಸ್‌ಎಸ್ ನ ಮುಖ್ಯ ಉದ್ದೇಶಗಳು ಗ್ರಾಮೀಣ ಜನರ ಅಭಿವೃದ್ಧಿ, ಜಾಗೃತಿ ಮತ್ತು ಶಿಕ್ಷಣವಾಗಿದೆ. ನನಗಲ್ಲ ನೀನು ಎಂಬ ವಿಚಾರದ ಮೇಲೆ ವಿದ್ಯಾರ್ಥಿಗಳು ಸೇವೆ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮತ್ತೆ ಮತ್ತೆ ಗ್ರಾಮಗಳಿಗೆ ಭೇಟಿ ನೀಡಿ ಅವರ ಸಂಕಷ್ಟಗಳನ್ನ ಪರಿಹರಿಸಲು ಪ್ರಯತ್ನಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕ್ಯಾದಿಗೆರೆ ಮುಖಂಡರಾದ ಸೋಮಶೇಖರ್, ಅಜಯ್ ಕುಮಾರ್, ಶಿವಮೂರ್ತಿ, ಶ್ರೀ ಶಂಕರಿ, ನಿರಂಜನ್,ಎನ್‌ಎಸ್‌ಎಸ್ ನೋಡಲ್ಲ ಅಧಿಕಾರಿ ಡಾ. ರಮೇಶ್ ಅಯ್ಯನಹಳ್ಳಿ, ಪ್ರೋ. ಲಾಲ್ ಸಿಂಗ್ ನಾಯಕ್, ಸಹ ಪ್ರಾಧ್ಯಾಪಕರಾದ ಸತೀಶ್‌ಗೌಡ. ಎಸ್. ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಡಾ ಎಚ್ ಕೆ ಎಸ್ ಸ್ವಾಮಿ, ವಿಜ್ಞಾನ ವಿಚಾರ ವೇದಿಕೆಯ ವಿವೇಕ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಗ್ರಾಮವನ್ನು ಸ್ವಚ್ಛಗೊಳಿಸಿ, ಸಾಂಸ್ಕöÈತಿ ಚಟುವಟಿಕೆಗಳನ್ನು ನೀಡಿ, ಕೊನೆಯ ದಿನವಾದ್ದರಿಂದ ದೀಪೋತ್ಸವವೆಂದು, ಭಾರತದ ಭೂಪಟದ ಸುತ್ತ ದೀಪಗಳನ್ನ ಹಚ್ಚಿ, ರಾಷ್ಟಿçÃಯ ಭಾವೈಕ್ಯತೆ ಮೂಡುವಂತ ಗೀತೆಗಳನ್ನು ಹಾಡಿ, ಗ್ರಾಮಸ್ಥರನ್ನು ಜಾಗೃತಗೊಳಿಸಿದರು.