ಡಾ.ಡಿ.ಎಂ.ಅಭಿನವ್‍ಗೆ ರಾಜ್ಯಮಟ್ಟದ ಶ್ರೇಷ್ಠ ಆರ್‍ಸಿಹೆಚ್ ಅಧಿಕಾರಿ ಪ್ರಶಸ್ತಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೬; ಚಿತ್ರದುರ್ಗ ಜಿಲ್ಲಾ ಆರ್‍ಸಿಹೆಚ್  ಅಧಿಕಾರಿ ಡಾ.ಡಿ.ಎಂ.ಅಭಿನವ್ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಆರ್‍ಸಿಹೆಚ್ ಅಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜುಲೈ 1ರಂದು ಬೆಂಗಳೂರಿನ ವಿಧಾನಸೌಧದ  ಕೊಠಡಿ ಸಂಖ್ಯೆ 334ರಲ್ಲಿ ನಡೆದ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಅವರಿಗೆ ತಾಯಿ ಮಕ್ಕಳ ವಿಭಾಗದ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿಗೆ ಭಾಜನರಾದ ಡಾ.ಡಿ.ಎಂ.ಅಭಿನವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವರು, ಇಲಾಖೆ ಮುಖ್ಯಸ್ಥರು ಶುಭ ಕೋರಿದರು.