ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ
ಕಲಬುರಗಿ:ಜು.5: ನಗರದ ಸಂಗಮೇಶ್ವರ್ ಸಭಾಗೃಹದ ದಿ. ವಸಂತ್ ಕುಷ್ಟಗಿ ವೇದಿಕೆಯಲ್ಲಿ ಜುಲೈ 7ರಂದು ಬೆಳಿಗ್ಗೆ 10-30ಕ್ಕೆ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ್ ಕುಲಕರ್ಣಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಲಿಂಗರಾಜಪ್ಪ ಅಪ್ಪಾ ಅವರು ನೆರವೇರಿಸುವರು. ನೇತೃತ್ವವನ್ನು ಜೇವರ್ಗಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್, ಅಧ್ಯಕ್ಷತೆಯನ್ನು ಸಮ್ಮೇಳನದ ಸರ್ವಾಧ್ಯಕ್ಷ ವಾಸುದೇವ್ ಅಗ್ನಿಹೋತ್ರಿ ಅವರು ವಹಿಸುವರು ಎಂದರು.
ಸಮ್ಮೇಳನದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್, ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಉದ್ಯಮಿ ಸಂಜೀ ಗುಪಾ, ಆನಂದ್ ದಂಡೋತಿ,ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಾ. ಗೌತಮ್ ಜಾಗೀರದಾರ್ ಅವರು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಅವರು ಹರಿದಾಸ ರತ್ನ ಪ್ರಶಸ್ತಿ ಪ್ರದಾನ ಮಾಡುವರು. ಆಕಾಶವಾಣಿ ನಿವೃತ್ತ ಅಧಿಕಾರಿ ಸದಾನಂದ್ ಪೆರ್ಲ ಅವರು ಕನ್ನಡದ ಕೃಷ್ಣ ಬಿಡುಗಡೆ ಮಾಡುವರು. ಮಧ್ಯಾಹ್ನ 12-15ಕ್ಕೆ ಅಮೃತ ಸಿಂಚನ ಗೋಷ್ಠಿ ಜರುಗಲಿದೆ. ಡಾ. ಶೈಲಜಾ ಕೊಪ್ಪರ್, ಶ್ರೀಮತಿ ರೂಪಾ ಕುಲಕರ್ಣಿ ಅವರು ಉಪನ್ಯಾಸಕರಾಗಿ ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ್ ಅವರು ವಹಿಸುವರು. ಶ್ರೀಮತಿ ಶಕುಂತಲಾ ಪಾಟೀಲ್ ಜವಳಿ, ಶ್ರೀಮತಿ ಜ್ಯೋತಿ ಕೋಟನೂರ್, ಶ್ರೀಮತಿ ಜ್ಯೋತಿ ಲಾತೂರಕರ್, ಶ್ರೀಮತಿ ವೆಂಕುಬಾಯಿ ರಜಪೂತ್ ಅವರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಅನಂತ್ ಚಿಂಚನಸೂರ್ ತಂಡದಿಂದ ಭರತನಾಟ್ಯ ರೂಪಕ ಹಾಗೂ ಅನಂತ್ ಮಿಸ್ತ್ರಿ ಅವರಿಂದ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 2-30ಕ್ಕೆ ವಿವಿಕಧ ಭಜನಾ ಮಂಡಳಿಗಳಿಂದ ದಾಸರ ಹಾಡಿನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 4-15ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ಅನಿಲಕುಮಾರ್ ಬಿಡವೆ ಅವರು ಸಮಾರೋಪ ಭಾಷಣ ಮಾಡುವರು. ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧಾ ವಿಜೇತ ಭಜನಾ ಮಂಡಳಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಲ್ಹಾದ್ ಪೂಜಾರಿ, ಮಂಜುನಾಥ್ ಕಂಬಳಿಮಠ್, ಮಲ್ಲಿನಾಥ್ ಸಂಘಶೆಟ್ಟಿ, ಧನೇಶ್ ಮಾಲಗತ್ತಿ ಮುಂತಾದವರು ಉಪಸ್ಥಿತರಿದ್ದರು.