7ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಲಬುರಗಿ:ಜು.5: ನಗರದ ನೆಹರೂ ಗಂಜ್‍ನ ನಗರೇಶ್ವರ್ ಶಾಲೆಯಲ್ಲಿ ಇದೇ ಜುಲೈ 7ರಂದು ಬೆಳಿಗ್ಗೆ 9-30ರಿಂದ ಮಧ್ಯಾಹ್ನ 1-30ರವರೆಗೆ ಉಚಿತ ಮೇಘಾ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದ ಜಿಲ್ಲಾಧ್ಯಕ್ಷ ಹಣಮಯ್ಯ ಬೇಲೂರು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದ್‍ನ ಯಶೋಧಾ ಆಸ್ಪತ್ರೆ, ನಗರದ ಜಿಲ್ಲಾ ಆಸ್ಪತ್ರೆ, ಆದಿತ್ಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಶ್ರೀ ಚನ್ನಪ್ಪ ಮೆಮೋರಿಯಲ್ ಕಿವಿ, ಮೂಗು, ಗಂಟಲು ಕೇರ್ ಸೆಂಟರ್, ಅನುಗ್ರಹ ಕಣ್ಣಿನ ಆಸ್ಪತ್ರೆ, ತಾಯಿ ಮತ್ತು ಮಗು ಕಾಳಜಿ ಕೇಂದ್ರ ಇಟಗಂಪಲ್ಲಿ, ಶರಣ್ ಆಸ್ಪತ್ರೆ, ಪಿ.ಎಸ್. ರಾವ್ ಮೂಲವ್ಯಾದಿ ಆಸ್ಪತ್ರೆ, ಮಂದಕ್ಕನಳ್ಳಿ ಆಸ್ಪತ್ರೆ, ಕೋಠಾರಿ ಹಲ್ಲಿನ ಮತ್ತು ನಾಟಿ ಆಸ್ಪತ್ರೆ ಶಿಬಿರಕ್ಕೆ ಸಹಯೋಗ ಒದಗಿಸಿವೆ ಎಂದರು.
ಶಿಬಿರದಲ್ಲಿ ಡಾ. ಪ್ರವೀಣಕುಮಾರ್ ಕೆ., ಡಾ. ಗುರುರಾಜ್ ಪ್ರಮೋದ್, ಡಾ. ರೇಣುಪ್ರಸಾದ್, ಡಾ. ಸಾಗರ್ ಕಟಾರೆ, ಡಾ. ವಿವೇಕ್, ಡಾ. ಹರೀಶ್, ಡಾ. ರೇವನ್ ಆನಂದ್, ಡಾ. ರಾಜಶ್ರೀ ಪಾಲಾದಿ, ಡಾ. ರಟಕಲ್ ಕೇದಾರನಾಥ್, ಡಾ. ಪ್ರಭುಗೌಡ ಬಿ.ಎಲ್., ಡಾ. ನಿತಿನ್ ಎಸ್. ಇಟಗಂಪಲ್ಲಿ, ಡಾ. ಅನುಜಾ ಇಟಗಂಪಲ್ಲಿ, ಡಾ. ಸಾಗರ್ ಎಸ್. ಬಿರಾದಾರ್, ಡಾ. ಶೃತಿ ಕೊಲ್ಲಿ, ಡಾ. ಪಿ.ಎಸ್. ರಾವ್, ಡಾ. ರಿಚಾರಾವ್, ಡಾ. ರಾಹುಲ್ ಮಂದಕನಳ್ಳಿ, ಡಾ. ನಿಶಾಂತ್ ಜಾಜಿ, ಡಾ. ಸಾಗರ್ ಸೌರಭ್, ಡಾ. ಚೈತನ್ಯ ಕೊಠಾರಿ, ಡಾ. ಮೀನಾಕ್ಷಿ ಕೊಠಾರಿ ಮುಂತಾದ ವೈದ್ಯರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಲಾಭ ಪಡೆಯಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಗುಪ್ತ. ಡಾ. ಎನ್.ಜಿ. ಶ್ರೀಧರ್, ಡಾ. ವಿದ್ಯಾಸಾಗರ್ ಇಟ್ಟಗಂಪಲ್ಲಿ ಅವರು ಉಪಸ್ಥಿತರಿದ್ದರು.