ಭೋವಿ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು,ಅವರ ಅಭಿವೃದ್ಧಿಗೆ ಶ್ರಮಿಸಲಾಗುವುದು:ಅಧ್ಯಕ್ಷ ಎಸ್.ರವಿಕುಮಾರ್
ಕಲಬುರಗಿ:ಜು.5: ಭೋವಿ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ ರವಿಕುಮಾರ ಹೇಳಿದರು.
ಶುಕ್ರವಾರದಂದು ಕನ್ನಡ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. ಸಮಾಜದ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಉದ್ಯೋಗ ಸೃಷ್ಟಿ ಹೊಲಿಗೆ ಯಂತ್ರ ವಿತರಣೆ, ಸ್ವ ಉದ್ಯೋಗಕ್ಕಾಗಿ ಸಹಾಯ ಧನದ ಕಾರ್ಯಮಾಡಲಾಗುತ್ತದೆ. ಈಗಾಗಲೇ ಸರ್ಕಾರದಿಂದ 20ರಿಂದ 20 ಪ್ರತಿಶತ ಹಣ ಬಿಡುಗಡೆ ಬಾಕಿ ಇದ್ದು ಅದನ್ನು ಸಹ ಅದಷ್ಟು ಬೇಗ ಬಿಡುಗಡೆ ಮಾಡುವ ಕೆಲಸವಾಗುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಭೋವಿ ಸಮಾಜದವರ ಕುಲಕಸುಬಾಗಿರುವ ಕಲ್ಲು ಒಡೆಯವ ಕಾಯಕದವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ 2 ಲಕ್ಷ ಭೋವಿ ಜನಾಂಗದ ವರಿಗೆ ಸರಕಾರದದಿಂದ ಸಿಗುವ ಸೌಲಭ್ಯಗಳನ್ನು ಕುರಿತು ಅರಿವು ಮೂಡಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಒಂದು ಅಭಿವೃದ್ಧಿ ಮಂಡಳಿಯಲ್ಲಿ ಸಿಗುವ ವಾಹನಗಳನ್ನು ಮೂರರಿಂದ ನಾಲ್ಕು ವರ್ಷಗಳಾದ ಮೇಲೆ ಗುಜರಿಗೆ ಹಾಕಲಾಗುತ್ತದೆ ಹೀಗಾಗಿ ಮಹಿಳೆಯರಿಗೆ ಸಹಾಯ ಧನ ನೀಡಿದಾಗ ಅವರು ಯಾವುದೋ ಒಂದು ವ್ಯಾಪಾರವನ್ನು ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಅವರಿಗೆ ಶಾಶ್ವತ ಉದ್ಯೋಗವನ್ನು ಕಲ್ಲಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.ಅಲ್ಲದೆ ಜಿಲ್ಲೆಯಲ್ಲಿರುವ ಭೋವಿ ಜನಾಂಗದವರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತದೆ ಎಂದರು.
101 ಉಪ-ಜಾತಿಗಳ ಅಧಿಸೂಚನೆ ಆಧಾರದ ಮೇಲೆ ಭೋವಿ ಜಾತಿಯ ಐತಿಹಾಸಿಕ ಹಿನ್ನೆಲೆ,ಸಾಂಸ್ಕøತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ,ಪ್ರಾದೇಶಿಕ ಭಾಷೆಗಳು,ಹಬ್ಬಗಳು ಆಚರಣೆಗಳನ್ನು ಆಧರಿಸಿ ಪರಿಶಿಷ್ಟ ಜಾತಿಯ 08 ಉಪ ಜಾತಿಗಳನ್ನು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಗುರುತಿಸಲಾಗಿದೆ. ಎಂದರು.
ಭೋವಿ ಜನಾಂಗದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅನುಷ್ಠಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ವರ್ಷ ವಿವಿಧ ಅಭಿವೃದ್ಧಿ ಯೋಜನೆಯಡಿ (SಅSP) ಅನುದಾನವನ್ನು ನಿಗದಿಪಡಿಸುತ್ತದೆ ಎಂದರು.
ಬಳಿಕ ಜೇವರ್ಗಿ ಕ್ರಾಸ್ ರಸ್ತೆ ಗೋಧುತಾಯಿ ಕಾಲೋನಿ ಹತ್ತಿರದಲ್ಲಿರುವ ಕಲ್ಲು ಹೊಡೆಯುವ ಜನಾಂಗದವರನ್ನು ಅಧ್ಯಕ್ಷರು ಭೇಟೆ ನೀಡಿದರು. ಸಮುದಾಯ ಜನಾಂಗದವರ ಮಾತನಾಡಿ, ಸರ್ಕಾರಕ್ಕೆ ನಮಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದಿಲ್ಲ ನಾವು 10-15 ವರ್ಷದಿಂದ ಇಲ್ಲಿಯ ಕಾಲ ಕಳೆಯುತ್ತಿದ್ದೇವೆ ಕುಡಿಯಲು ನೀರು ಶೌಚಾಲಯ ಇರುವುದಿಲ್ಲ ಎಂದರು ಮುಂದಿನ ದಿನಗಳಲ್ಲಿ ನೆರವು ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿರುವ ಭೋವಿ ಜನಾಂಗದವರ ಸಮಸ್ಯೆಗಳಿಗೆ ಸ್ಫಂದನೆ ನೀಡಲಾಗುತ್ತದೆ ಅವರ ಬಳಿ ಹೋಗಿ ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳವಂತಹ ಕೆಲಸ ಮಾಡಲಾಗುತ್ತದೆ. ಗಂಗಾಕಲ್ಯಾಣ ಯೋಜನೆಯಲ್ಲಿಯೂ ಈ ಸಮುದಾಯದ ರೈತರಿಗೆ ಸಾಮಗ್ರಿಗಳನ್ನು ವಿತರಿಸುವ ಯೋಜನೆಗೆ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ ನಾವು ಏನು ಮಾಡಲಾಗಲ್ಲವೆಂದು ಅಸಹಾಯಕತೆಯನ್ನು ತೊಡಿಕೊಂಡಿದ್ದಾರೆ.
ವಿಜಯಪುರ,ಕಲಬುರಗಿ,ತುಮಕೂರು,ಚಿತ್ರದುರ್ಗ,ರಾಯಚೂರು,ಧಾರವಾಡ,ಬಳ್ಳಾರಿ,ಕೋಲಾರ ಮತ್ತು ಕೋಲಾರ ಶಿವಮೊಗ್ಗ ಜಿಲ್ಲೆಗಳಲ್ಲಿ ನಿಗಮದ ಪ್ರತ್ಯೇಕ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳನ್ನು 11 ಜಿಲ್ಲೆಗಳಲ್ಲಿ ತೆರೆಯಲು ಅವಕಾಶವಿದ್ದು.ಅದರಂತೆ ಈಗಾಗಲೇ ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ,ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ಕಛೇರಿಯನ್ನು ತೆರೆಯಲಾಗಿದೆ ಎಂದರು.
ಉಳಿದ 26 ಜಿಲ್ಲೆಗಳಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಮೂಲಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವಯಂ ಉದ್ಯೋಗ (ನೇರಸಾಲ).ಉದ್ಯಮಶೀಲತಾ ಯೋಜನೆ ಐ ಎಸ್ ಬಿ (ಬ್ಯಾಂಕ್ ಸಹಯೋಗದಲ್ಲಿ) ಸ್ವಾವಲಂಬಿ ಸಾರಥಿ ಯೋಜನೆ.ಮೈಕ್ರೋ ಕ್ರೆಡಿಟ್ (ಪ್ರೇರಾಣ) ಯೋಜನೆ. ಭೂ ಒಡೆತನ ಯೋಜನೆ.ಗಂಗಾ ಕಲ್ಯಾಣ ಯೋಜನೆ.ಏತ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತದೆ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು ಹಾಗೂ ಸೌಲಭ್ಯ ಪಡೆಯುವ ಅರ್ಜಿದಾರರು ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕು ಗರಿಷ್ಟ ವಯೋಮಿತಿ ತೆಗೆದುಹಾಕಲಾಗಿದೆ,ವಾಹನಗಳ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸನ್ಸ್ ಕೆಲವೊಂದು ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದ್ದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ ಹೊನ್ನಗುಟ್ಟಿ ತಾಲೂಕಾ ಅಧಿಕಾರಿ ಲಘಮಣ್ಣ ಕರಣಗಿ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಗುಂಡಪ್ಪ ಸಾಳಕೆ ಉಪಸ್ಥಿತರಿದ್ದರು.