ಶ್ರೀ.ಮ.ಸ.ಸ. ಕಾರ್ಖಾನೆಯ ಅವ್ಯವಹಾರ ಸಿಬಿಐ ತನಿಖೆಗೆ ನಿರ್ಧಾರ
ಚನ್ನಮ್ಮನ ಕಿತ್ತೂರು-26 :ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಲೆಕ್ಕವಿಲ್ಲದಷ್ಟು ಅವ್ಯವಹಾರ ನಡೆದಿದೆ ಎಂದು ದಾಖಲೆಗಳ ಮೂಲಕ ಆರೋಪ ತಿಳಿದುಬಂದಿದೆ ಎಂದು ಕಾರ್ಖಾನೆ ನೂತನ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹೇಳಿದರು.
ತಾಲೂಕಿನ ಮಲಪ್ರಭಾ ಸಕ್ಕರೆ ಕಾರ್ಖಾನೆ ಅವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದವರು. ನಾನು ಅಧಿಕಾರ ವಹಿಸಿಕೊಂಡ ಮೊದಲನೇ ದಿನವೇ ಸಕ್ಕರೆ ದಾಸ್ತಾನು ದಾಖಲೆಗಳನ್ನು ಪರೀಶಿಲಿಸಿದ್ದೇನೆ. ಅದು ನನಗೆ ಸರಿಯಾದ ಮಾಹಿತಿ ಸಿಗದ ಕಾರಣ ಈ ಹಿಂದಿನ ಕಾರ್ಖಾನೆ ಎಂಡಿ ವೀರೇಶ ಹೂಲಿಕಟ್ಟಿಯವರಿಗೆ ಪತ್ರ ಬರೆದು ಲೆಕ್ಕಪತ್ರ ಒಪ್ಪಿಸಲು ಮೂರು ಬಾರಿ ಹೇಳಿದರೂ ಅವರು ನಮ್ಮ ಪತ್ರಕ್ಕೆ ಬೆಲೆ ಕೊಡಲಿಲ್ಲ. ಗೋದಾಮಿನಲ್ಲಿದ್ದ 40 ಟನ್ ಸಕ್ಕರೆ 34 ಲಾರಿಗಳಲ್ಲಿ ಕೇವಲ 6 ಟನ್ ಸಕ್ಕರೆ ಸಾಗಿಸಲಾಗಿದೆ ಎಂದು ದಾಖಲೆಯಲ್ಲಿ ವಿವರಿಸಿದ್ದಾರೆ. ಈ ವಿಷಯ ಕುರಿತು ಅಢಾವೆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ನಿಮ್ಮೇಲ್ಲರ ಒಪ್ಪಿಗೆಯ ಮೇರೆಗೆ ಎಲ್ಲ ಸಿದ್ದತೆ ಮಾಡಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಲಾಗುವುದು. ತಪ್ಪಿಸ್ಥರ ಮೇಲೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ ಎಂದರು.
ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ ಮಾತನಾಡಿ ಕಾರ್ಖಾನೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ನಿರ್ದೇಶಕ ಮಂಡಳಿಯವರೇ ಒಪ್ಪಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಲು ಮುಂದಾಗಿದ್ದಾರೆ. ಇದಕ್ಕೆ ನಿಮ್ಮೇಲ್ಲರ ಸಹಕಾರ ಅಗತ್ಯವಿದೆ. ರೈತರು ಕ್ಷಮಿಸಬೇಕು. ಅವ್ಯವಹಾರ ನಡೆದಿದ್ದು ನಿಜವಿದೆ ಇದು ಕಾರ್ಖಾನೆ ಅಳಿವು-ಉಳಿವಿನ ಪ್ರಶ್ನೆ ಇದನ್ನು ಸುಮ್ಮನೆ ಬಿಡಬಾರದು ತನಿಖೆಗೆ ಒಳಪಡಿಸಬೇಕೆಂದರು.
ಇನ್ನೂ ಅನೇಕ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆ ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ಪ್ರೌಢಶಾಲೆ ಮಕ್ಕಳಿಂದ ಪ್ರಾರ್ಥನಾ ಗೀತೆ ನೇರವೇರಿತು.
ಈ ವೇಳೆ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿಕಟಪೂರ್ವ ಅಧ್ಯಕ್ಷ ನಾಶೀರ ಬಾಗವಾನ, ನಿರ್ದೇಶಕರುಗಳಾದ ಸಾವಂತ ಕಿರಬನವರ, ಜ್ಯೋತಿಬಾ ಹೈಬತ್ತಿ, ಬಸವರಾಜ ಪುಂಡಿ, ಲಕ್ಷ್ಮಣ ಎಮ್ಮಿ, ಸಿದ್ದಪ್ಪ ದೂರಪ್ಪನವರ, ಮಂಜುನಾಥ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ಬೆಂಡಿಗೇರಿ, ಸಂಜೀವ ಹೊಬಳೇಪ್ಪನವರ. ಅಶೋಕ ಬೆಂಡಿಗೇರಿ, ಭರತೇಶ ಶೆಬ್ಬಣ್ಣವರ, ಮೀನಾಕ್ಷಿ ನೆಲಗಳಿ, ರೈತ ಮುಖಂಡರು, ಕಾರ್ಮಿಕ ಸಿಬ್ಬಂದಿ, ಸೇರಿದಂತೆ ಶೇರುದಾರರಿದ್ದರು. ಸುರೇಶ ಗಣಾಚಾರಿ ನಿರೂಪಿಸಿ, ಸ್ವಾಗತಿಸಿದರು.