ದಾವಣಗೆರೆ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ. ೨೭;ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಾವಣಗೆರೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು  ಜಿಲ್ಲಾ  ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟವನ್ನು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ದಿನೇಶ್ ಕೆ ಶೆಟ್ಟಿ ದೀಪ ಬೆಳಗಿಸಿ, ಗುಂಡು ಎಸೆವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರು ತಾಲೂಕಿನಿಂದ ಆಯ್ಕೆಯಾದ ಖೋ -ಖೋ. ಕಬ್ಬಡ್ಡಿ. ಎತ್ತರ ಜಿಗಿತ. ಉದ್ದ ಜಿಗಿತ. ಬ್ಯಾಡ್ಮಿಂಟನ್.  100 ಮೀಟರ್ ಒಟ. 200 ಮೀಟರ್ ಓಟ. 800 ಮೀಟರ್. ವಾಲಿಬಾಲ್. ಬ್ಯಾಸ್ಕೆಟ್ಬಾಲ್. ಯೋಗಾಸನ. ಗುಂಡುಎಸೆತ. ಡಿಸ್ಕಸ್ ತ್ರೋ. ಜಾವೆಲಿನ್. ಟೇಬಲ್ ಟೆನ್ನಿಸ್. ಇನ್ನು ಮುಂತಾದ ಕ್ರೀಡಾಪಟುಗಳು ಭಾಗವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹಾಯಕ ನಿರ್ದೇಶಕರಾದ  ಜಯಲಕ್ಷ್ಮಿಬಾಯಿ.  ಸೂಪರ್ ಡೆಂಟ್  ಅರ್ಪಿತ. ಖೋ ಖೋ ತರಬೇತಿದಾರಾದ  ಎಂ ರಾಮಲಿಂಗಪ್ಪ. ಸುನಿತಾ, ಕಬ್ಬಡಿ.   ತರಬೇತಿರಾದ   ಶ್ರೀಶೈಲ. ವಾಲಿಬಾಲ್ ಕೋಚ್ ಜಮಲ್. ದೈಹಿಕ ಶಿಕ್ಷಕರಾದ ಶ್ರೀನಿವಾಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು.