೫೧ ಕೆಜಿ ಗಾಂಜಾ ಜಪ್ತಿ
ನಗರದ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ಸೈಬರ್ ಉತ್ತರ ವಿಭಾಗದ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ಸುಮಾರು ೩ ಲಕ್ಷ ರೂ.ಬೆಲೆಬಾಳುವ ಡ್ರಗ್ಸ್‌ನ್ನು ನಗರ ಪೊಲೀಸ್ ಆಯುಕ್ತ ಬಿ,ದಯಾನಂದ್ ರವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.
ಬೆಂಗಳೂರು,ಸೆ.೨೭-ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಕೆಜಿಹಳ್ಳಿ ಪೊಲೀಸರು ೩.೧೨ ಲಕ್ಷ ಮೌಲ್ಯದ ೫೧ ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.ಕಳೆದ ಸೆ.೨೪ ರಂದು ಕೆಜಿಹಳ್ಳಿಯ ಸಂತೆ ಮೈದಾನದಲ್ಲಿ ಕಾರಿನಲ್ಲಿಟ್ಟು ಪರಿಚಯಸ್ಥ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಬಂಧಿತರ ಕಾರನಲ್ಲಿದ್ದ ೫೧ ಕೆ.ಜಿ ಗಾಂಜಾವನ್ನು ಪಡೆಯಲಾಗಿದ್ದು, ವಿಚಾರಣೆಯಲ್ಲಿ ಬಂಧಿತರ ಪೈಕಿ ಓರ್ವ ಆರೋಪಿಯು ಹಾಸನದ ಹೊಳೆನರಸೀಪುರ ತಾಲ್ಲೋಕಿನವನಾಗಿದ್ದು, ಮತ್ತೋರ್ವನು ಕೋಲಾರ ಜಿಲ್ಲೆಯ ಕೆಂಡಟ್ಟಿ ಗ್ರಾಮದವನೆಂದು ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದರು.