ಸಿಎಂ ರಾಜೀನಾಮೆಗೆ ಶ್ರೀರಾಮುಲು ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,೨೭- ಮುಡಾ ತನಿಖೆ ಎದುರಿಸಲು ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು. ಸಿದ್ದರಾಮಯ್ಯ ಅವರೇ ಅನೇಕ ಬಾರಿ ಸದನದಲ್ಲಿ ಯಾರೇ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಗುರಿಯಾದಾಗ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದರು. ಅದರಂತೆ ಅಧಿಕಾರದಲ್ಲಿದ್ದು ತನಿಖೆ ಎದುರಿಸುವುದು ನೈತಿಕತೆಗೆ ಧಕ್ಕೆ ಆಗಲಿದೆ.ಹೀಗಾಗಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಇಡಿ ತನಿಖೆಯಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಪಿಎ ವಿಜಯಕುಮಾರ್ ಬರೆದಿಟ್ಟುಕೊಂಡತೆ. ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಕೆಯಾಗಿದೆ ಅದಕ್ಕಾಗಿ ಸಂಸದ ಸ್ಥಾನಕ್ಕೆ ತುಕರಾಂ ಅವರು ರಾಜೀನಾಮೆ ನೀಡಬೇಕು ಎಂದರು. ಸಿಬಿಐ ಇನ್ನು ಮುಂದೆ ನೇರವಾಗಿ ಯಾವುದೇ ಪ್ರಕರಣದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿಪಡೆಯಬೇಕು ಎಂಬುದು ತಾವು ಮಾಡಿದ ಭ್ರಷ್ಟತೆಯನ್ನು ಮುಚ್ಚಿಕೊಳ್ಳಲು ಮಾಡಿದ ಪ್ರಯತ್ನವಾಗಿದೆ ಎಂದು ಟೀಕಿಸಿದರು.