ಗ್ರಾಹಕರ ವಿಶ್ವಾಸದಿಂದ ಬ್ಯಾಂಕಿನ ಪ್ರಗತಿ
ಕಲಘಟಗಿ, ಸೆ 27: ಸದಸ್ಯರು, ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದಿಂದ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ ಎಂದು ವೈಸ್ ಚೇರಮನ್ ಜೆ.ಕೆ. ಕಡ್ಲಾಸ್ಕರ ಹೇಳಿದರು.
ಇತ್ತೀಚೆಗೆ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ದಿ ಕಲಘಟಗಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‍ನ 65ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಸಸಿಗೆ ನೀರುಣಿಸುವ ಮೂಲಕ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು, ಸಾಮಾನ್ಯ ಜನರು, ಆರ್ಥಿಕ ದುರ್ಬಲ ವರ್ಗದವರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಸಾಲವನ್ನು ನೀಡುವುದರೊಂದಿಗೆ ತನ್ನ ಕಾರ್ಯ ವ್ಯಾಪ್ತಿಯಲ್ಲಿನ ಎಲ್ಲ ಸಹಕಾರಿಗಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು ಮತ್ತು ಬ್ಯಾಂಕಿನ ಚೇರಮನ್ನರಾದ ಎಸ್.ಎನ್. ಭರಮಗೌಡರ ಪರವಾಗಿ ವಾರ್ಷಿಕ ಮಹಾಸಭೆಗೆ ಆಗಮಿಸಿದಂತಹ ಎಲ್ಲರಿಗೂ ಶುಭಾಶಯ ಕೋರಿದರು.
ವ್ಯವಸ್ಥಾಪಕ ಗಂಗಾಧರ ಅಂಗಡಿ ಮಾತನಾಡಿ, ಬ್ಯಾಂಕ್ ಸಾಲಗಾರರು ಸಕಾಲದಲ್ಲಿ ತಮ್ಮ ಸಾಲವನ್ನು ಮರುಪಾವತಿಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದರೊಂದಿಗೆ ಸಹಕಾರಿ ತತ್ವದ ಘನತೆಯನ್ನು ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಬ್ಯಾಂಕಿನ ಮ್ಯಾನೇಜರ್ ಎ.ಎನ್. ಬಡಿಗೇರ ಅವರ ಮಾತೋಶ್ರೀ ನಾಗವ್ವ ಹಾಗೂ ಪತ್ನಿ ಗೀತಾ ಅವರನ್ನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸನ್ಮಾನಿಸಿ ಬಡಿಗೇರ ಅವರಿಗೆ ಬೀಳ್ಕೊಡಲಾಯಿತು.
ಸಂಗೀತ ಕಲಾವಿದರಾದ ಅಶೋಕ ಅರ್ಕಸಾಲಿ, ಮಲ್ಲಯ್ಯ ಪೂಜಾರ ಹಾಗೂ ನೂತನ ಮ್ಯಾನೇಜರ್ ಗಂಗಾಧರ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಪ್ರಭಾರ ಮ್ಯಾನೇಜರ್ ಜಿ.ವ್ಹಿ. ಅಂಗಡಿ ವರದಿ ವಾಚನ ಮಾಡಿದರು. ನಿರ್ದೇಶಕರಾದ ಪಿ.ಎಲ್. ರಘಪ್ಪನವರ ಸ್ವಾಗತಿಸಿದರು. ಪ್ರಾರ್ಥನಾ ಗೀತೆಯನ್ನು ಎ.ಬಿ. ಅರ್ಕಸಾಲಿ, ಮಲ್ಲಯ್ಯ ಪೂಜಾರ ನಡೆಸಿಕೊಟ್ಟರು.
ನಿರ್ದೇಶಕರಾದ ಪ್ರಭಾಕರ ರಘಪ್ಪನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಜೆ.ಕೆ. ಕಡ್ಲಾಸ್ಕರ, ಎಂ.ಜೆ. ಜೌಧರಿ, ಮಂಜುಳಾ ದೇವಲಾಪೂರ, ಆರ್.ಎಸ್. ರೋಟ್ಟಿ, ಆರ್.ಸಿ. ಶೀಲವಂತರ, ದೇವರಾಜ ಗಬ್ಬೂರ, ಸಿ.ಬಿ. ಸಂಗೇದೇವರಕೊಪ್ಪ, ಗಣ್ಯರಾದ ಮುರುಗೆಪ್ಪ ಕಟ್ಟಿ, ಮಾದೇವ ಮೇಟಿ, ಎಸ್.ಬಿ. ಅಮರಗೋಳ, ನಿಂಗಪ್ಪ ನಿಂಬಣ್ಣವರ, ರವಿ ಕೊಳೇಕರ, ಪ್ರಭಾಕರ ನಾಯಕ, ಮುರಳಿ ವರ್ಕು, ರಾಕೇಶ ಅಳಗವಾಡಿ, ಮಾದೇವಪ್ಪ ಹಡಪದ, ಡಾ. ವೈ.ಬಿ. ಡಂಬಳ, ಕರುಣಾಕರ ಶೆಟ್ಟಿ, ವಿ.ಬಿ. ಶಿವನಗೌಡ್ರ, ಕೆ.ಬಿ. ಗುಡಿಹಾಳ, ಮಂಜುನಾಥ ಧನಿಗೊಂಡ ಹಾಗೂ ಬ್ಯಾಂಕಿನ ಸಿಬ್ಬಂದಿ ಎ.ಬಿ. ಮಿಠಾಯಿಗಾರ, ಎಸ್.ಎಸ್. ಅಮರಗೋಳ, ಫರೀದಾ ಬೇಪಾರಿ, ಅನಂತ ರಘಪ್ಪನವರ, ಕೆ.ಎಂ. ಚುಟಗೇನವರ, ಆಯ್.ಆರ್. ಮುಳ್ಳೂರ, ಮಹಾವೀರ ಜವಳಿ ಉಪಸ್ಥಿತರಿದ್ದರು.