ದೇಹದಾನ ಸರ್ವಶ್ರೇಷ್ಠ ದಾನ: ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ
ಕಲಬುರಗಿ :ಜು.5: ಜಗತ್ತಿನಲ್ಲಿ ವಿವಿಧ ರೀತಿಯ ದಾನ ಪದ್ಧತಿಗಳಿದ್ದರೂ, ಮನುಷ್ಯ ತನ್ನ ದೇಹವನ್ನು ಸಮಾಜದ ಒಳಿತಿಗಾಗಿ ದಾನ ಮಾಡುವುದು ಸರ್ವಶ್ರೇಷ್ಠ ದಾನವಾಗಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರು ಬಣ್ಣಿಸಿದರು.
ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಕಂಬಳಿಮಠ ದಂಪತಿಗಳು ನಗರದ ಜಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಿದ ನಂತರ ಶರಣ ಸಂಸ್ಥಾನಕ್ಕೆ ಆಗಮಿಸಿ 8ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ ಶರಣಬಸವಪ್ಪ ಅಪ್ಪಾಜಿ ಆಶಿರ್ವಾದ ಪಡೆದ ಸಂದರ್ಭದಲ್ಲಿ ಪೂಜ್ಯ ಡಾ.ಅವ್ವಾಜಿ ಮಾತನಾಡಿದರು.
ಆಶಿರ್ವಾದ ನೀಡಿ ಮಾತನಾಡಿದ ಪೂಜ್ಯ ಡಾ ಅವ್ವಾಜಿ ಯವರು, ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಔದಾರ್ಯತೆ ಮೆರೆಯುತ್ತಾನೆ. ಆದರೆ ಜೀವನದ ನಂತರವೂ ಜನರಿಗೆ ಉಪಯೋಗವಾಗುವುದು ಅಸಾಮಾನ್ಯವಾದದ್ದು ಇಂತಹ ಒಳ್ಳೆಯ ಕಾರ್ಯ ಮಾಡಿದ ಕಂಬಳಿಮಠ ದಂಪತಿಗಳು ಇತರರಿಗೆ ಅನುಕರಣೀಯ ಎಂದರು.
ದೇಹದಾನಿಗಳಾದ ನಾಗರತ್ನ ಹಾಗೂ ಮಂಜುನಾಥ್ ಕಂಬಳಿಮಠ ದಂಪತಿಗಳು ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಯ ಮರಣಾನಂತರ ದೇಹ ಮಣ್ಣುಪಾಲು ಅಥವಾ ಬೆಂಕಿಯ ಪಾಲಾಗುತ್ತದೆ. ಇದರಿಂದಾಗಿ ಯಾರಿಗೂ ಪ್ರಯೋಜನವಾಗದು. ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಲೇಂದು ನಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶರಣ ಸಂಸ್ಥಾನದ ಡಾ. ಅಲ್ಲಮಪ್ರಭು ದೇಶಮುಖ,
ಪ್ರತಿಯೊಬ್ಬರೂ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಯಾವುದೇ ರೀತಿಯ ದಾಸೋಹ ಸಕಲ ಜೀವಿಗಳಿಗೆ ಲೇಸನ್ನೇ ಬಯಸುತ್ತದೆ.
-ಪೂಜ್ಯ ಶ್ರೀ ಡಾ ಶರಣಬಸವಪ್ಪ ಅಪ್ಪಾ
8ನೇ ಪೀಠಾಧಿಪತಿಗಳು, ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾಗೂ ಕುಲಾಧಿಪತಿಗಳು ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ