ಡಾ.ಹಳಕಟ್ಟಿ ಅವರು ವಚನಗಳನ್ನು ಉಳಿಸಿ ಬೆಳೆಸಿದವರು
ತಾಳಿಕೋಟೆ:ಜು.5: ವಚನಫಿತಾಮಹವೆಂದೇ ಹೆಸರಾಗಿದ್ದ ಡಾ.ಫ.ಗು.ಹಳಕಟ್ಟಿ ಅವರು ಸಂಶೋದಕರು ಸಾಹಿತ್ಯ ಪ್ರಚಾರಕರು ಮತ್ತು ಸಂಪಾದಕರಾಗಿದ್ದರಲ್ಲದೇ ಯಾವ ರೀತಿ ಪಕೀರನಿಗೆ ಆಸೆ ಇರುವದಿಲ್ಲವೋ ಅದೇ ರೀತಿ ಡಾ.ಪಕೀರಪ್ಪನವರು ವಚನಗಳನ್ನು ಉಳಿಸಿ ಬೆಳೆಸಿ 83ವರ್ಷಗಳ ಕಾಲ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರೀಯರಾಗಿದ್ದರೆಂದು ಎಸ್.ಕೆ.ಕಲಾ ಹಾಗೂ ವಾಣಿಜ್ಯ ವಿಜ್ಞಾನ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಆರ್.ವ್ಹಿ.ಜಾಲವಾದಿ ಅವರು ನುಡಿದರು.
ಗುರುವಾರರಂದು ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಪರಿಷತ್ತಿನ ಸಭಾ ಭವನದಲ್ಲಿ ಏರ್ಪಡಿಸಲಾದ ವಚನ ಫಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಡಾ.ಫ.ಗು.ಹಳಕಟ್ಟಿಯಂತವರು ಮತ್ತೇ ಮತ್ತೇ ಹುಟ್ಟಿ ಬರಬೇಕಾಗಿದೆ ಬಸವಣ್ಣನವರ ವಚನಗಳಿಗೆ ಇನ್ನಷ್ಟು ಹೆಚ್ಚಿಗೆ ಬೆಳಕು ನೀಡುತ್ತಾ ಸಾಗಿದ್ದರೆಂದು ಹೇಳಿದ ಅವರು ಕಲ್ಬುರ್ಗಿ ಸಂಶೋದಕರನ್ನು ಕೂಡಾ ನೆನಪಿಸಿದ ಪ್ರೋ.ಜಾಲವಾದಿ ಅವರು ಶ್ರೀಮಂತ ಸಾಹಿತ್ಯ ಬೆಳೆಯಲು ಇಂತಹ ಚಿಂತಕರ ಅಗತ್ಯವಾಗಿದೆ ಎಂದರು.
ಇನ್ನೋರ್ವ ಕನ್ನಡ ಸಾಹಿತ್ಯ ಪರಿಷತ್ತಿನ ತಾಳಿಕೋಟೆ ತಾಲೂಕಾ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಪ್ರತಿಭಾವಂತ ಮಕ್ಕಳಿಗೂ ಹಾಗೂ ಪ್ರತಿಯೊಂದು ಶಾಲೆಗೂ 250 ವಚನಗಳನ್ನೋಳಗೊಂಡಂತಹ ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡುವಂತಹ ವ್ಯವಸ್ಥೆ ಕುರಿತು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ ಈ ಕಾರ್ಯ ಸೀಘ್ರವೇ ಮಾಡಲು ಮುಂದಾಗಲಿದ್ದೇವೆಂದರು. ಆಯಾ ಪುಸ್ತಕಗಳಲ್ಲಿ ಫ.ಗು.ಹಳಕಟ್ಟಿ ಅವರ ಜೀವನ ಕುರಿತು ಪರಿಚಯಿಸುವ ಕಾರ್ಯವೂ ಕೈಕೊಳ್ಳಲಾಗುತ್ತದೆ ಎಂದು ಹೇಳಿದ ಅವರು ಡಾ.ಫ.ಗು.ಹಳಕಟ್ಟಿ ಅವರು ತಮ್ಮ ವಕೀಲ ವೃತ್ತಿಯೊಂದಿಗೆ ಎಷ್ಟೇ ಕಷ್ಟ ಕಾರ್ಪಣ್ಯಗಳೂ ಬಂದರೂ ಸಹ ವಚನಗಳನ್ನು ಪ್ರಕಟಿಸುವ ಕಾರ್ಯಕ್ಕೆ ಮುಂದಾಗಿ ವಚನಫಿತಾಮಹವೆಂಬ ಬೀರದನ್ನು ಪಡೆಯಲು ಕಾರಣವಾಗಿದೆ ಎಂದರು.
ಇನ್ನೋರ್ವ ಉಪನ್ಯಾಸಕರುಗಳಾದ ಆರ್.ಬಿ.ದಾನಿ ಹಾಗೂ ಅನೀಲ ಇರಾಜ ಅವರು ಮಾತನಾಡಿ ವಚನಗಳನ್ನು ಮುದ್ರಿಸಿ ಅವುಗಳನ್ನು ಬೆಳಕಿಗೆ ತಂದಂತಹದ್ದು ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಅವರು ಸೈಕಲ್ ಮೇಲೆ ತಿರುಗಾಡಿ ವಚನಗಳನ್ನು ಸಂಗ್ರಹಿಸಿ ಸಾಲವನ್ನು ಮಾಡಿ ಪ್ರಕಟಿಸುವ ಕಾರ್ಯಕ್ಕೆ ಮುಂದಾದರಲ್ಲದೇ ಬೆಳಗಾವಿ ಹಾಗೂ ವಿಜಯಪುರದಲ್ಲಿ ವಕೀಲ ವೃತ್ತಿ ಮುಂದುವರೆದಿದ್ದರೂ ಕನ್ನಡ ಭಾಷೆಯ ಬಗ್ಗೆ ಬಹಳೇ ಆಸಕ್ತಿ ವಹಿಸಿ ವಚನಗಳನ್ನು ಪ್ರಕಟಿಸುವದರಲ್ಲಿ ಬೆಳಕು ತಂದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.
ಇದೇ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚಗೆ ನಿವೃತ್ತಿ ಹೊಂದಿದ ಪ್ರೋ.ಆರ್.ವ್ಹಿ.ಜಾಲವಾದಿ ಅವರಿಗೆ ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ.ಬಿ.ಭಂಟನೂರ, ಹಾಗೂ ಎಂ.ಎ.ಬಾಗೇವಾಡಿ, ಸಿವ್ಹಿ.ಮೆಣಸಿನಕಾಯಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಎಲ್ಲ ಉಪಸ್ಥಿತ ಕಸಾಪ ಸದಸ್ಯರು ಹಾಗೂ ಪದಾಧಿಕಾರಿಗಳು, ಅತಿಥಿ ಮಹೋದಯರು ಪುಷ್ಪಾರ್ಚನೆ ಮಾಡುವದರೊಂದಿಗೆ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ಎ.ಎ.ನಾಲಬಂದ, ಜಿ.ಟಿ.ಘೋರ್ಪಡೆ, ಡಾ.ನಜೀರ ಕೊಳ್ಯಾಳ, ಸಂಗಮೇಶ ಪಾಲ್ಕಿ, ಅಶೋಕ ಚಿನಗುಡಿ, ಸಿದ್ದಾರ್ಥ, ವಿಶ್ವನಾಥ ಗಣಾಚಾರಿ, ಶಿವಾನಂದ ಹೂಗಾರ, ಬಸವರಾಜ ಮದರಕಲ್ಲ, ಎಸ್.ವ್ಹಿ.ಜಾಮಗೊಂಡಿ, ಮಾನಸಿಂಗ್ ಕೊಕಟನೂರ, ಮುತ್ತು ಕಶೆಟ್ಟಿ, ಸಿದ್ದು ಶಿರಶಿ, ಮೊದಲಾದವರು ಉಪಸ್ಥಿತರಿದ್ದರು.
ವಿಶ್ವನಾಥ ಗಣಾಚಾರಿ ನಿರೂಪಿಸಿದರು. ಮಹಾಂತೇಶ ಮುರಾಳ ವಂದಿಸಿದರು.