ಸಡಗರ, ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ
ಹುಮನಾಬಾದ್ : ಜು.5:ತಾಲೂಕಿನಾಧ್ಯಂತ ಶುಕ್ರವಾರ ರೈತರು ಸಾಂಪ್ರದಾಯಿಕ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಸಿಂಗರಿಸಿದ ಮಣ್ಣೆತ್ತುಗಳನ್ನು ದೇವರ ಜಗುಲಿ ಮೇಲಿಟ್ಟು ಪೂಜಿಸಿ, ಪ್ರಸಕ್ತ ವರ್ಷವಾದರೂ ಮಳೆ-ಬೆಳೆ ಸಮೃದ್ಧಿಯಾಗಿ ಆಗಲೆಂದು ಪ್ರಾರ್ಥಿಸಿದರು. ಪ್ರಸಕ್ತ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೆ?ತ ಸಮುದಾಯದಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿದೆ.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬಹುತೇಕರು ತಮ್ಮ ಮನೆಯಲ್ಲಿಯೇ ಸಿದ್ಧಪಡಿಸಿದ ಮಣ್ಣೆತ್ತುಗಳನ್ನೆ? ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಅಮಾವಾಸ್ಯೆ ಮಾರನೆ ದಿನ ಮಣ್ಣೆತ್ತುಗಳನ್ನು ಕೆರೆ, ಬಾವಿ ಹಾಗೂ ಹಳ್ಳಗಳ ಬಳಿ ಪೂಜಿಸಿ ಬಿಟ್ಟು ಬರುವುದು ಪದ್ಧತಿ. ಅಮಾವಾಸ್ಯೆ ಹಿನ್ನೆಲೆ ನಗರ ಸೇರಿದಂತೆ ಗ್ರಾಮೀಣ ಭಾಗದ ರೆ?ತ ಕುಟುಂಬದ ಮಹಿಳೆಯರು, ಮಕ್ಕಳು, ಯುವಜನತೆ ಮಣ್ಣೆತ್ತು ಹಾಗೂ ಕೃಷಿ ಪರಿಕರ ಪೂಜಿಸಿದರು. ಹಬ್ಬದ ವಿಶೇಷಕ್ಕೆ ಹೋಳಿಗೆ, ಕರ್ಜಿಕಾಯಿ, ಕರಿಗಡಬು, ಕುಚಗಡಬು, ಪಾಯಸ ಮಾಡಿ ಸವಿದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಅಮಾವಾಸ್ಯೆ ದಿನ ಮನೆಯಲ್ಲಿ ಮಣ್ಣೆತ್ತಿಗೆ ಪೂಜೆ ಸಲ್ಲಿಸಿ, ಎಡೆ ಹಿಡಿದು ಮಳೆ-ಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸುತ್ತೆ?ವೆ. ಮಳೆರಾಯ ಕೃಪೆ ತೋರಿದ್ದು, ಸಂತಸ ಮೂಡಿದೆ ಎಂದು ರೈತರು ತಿಳಿಸಿದರು.
ಸಣ್ಣ ಗಾತ್ರದ ಎತ್ತುಗಳಿಗೆ 30-40 ರೂ. ಹಾಗೂ ದೊಡ್ಡ ಗಾತ್ರಕ್ಕೆ 40- 60 ರೂ.ವರೆಗೆ ಮಾರಲಾಗುತ್ತಿದೆ. ಪ್ರಸಕ್ತ ವರ್ಷ ತಾಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಮಣ್ಣೆತ್ತುಗಳ ವ್ಯಾಪಾರ ಚೆನ್ನಾಗಿ ಆಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.