ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳ ತಂಡ ಕರ್ನಾಟಕ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ಶೀಪ್ ಸ್ಪರ್ಧೆಗೆ
ಬೀದರ:ಜು.5:ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಬೆಂಗಳೂರು ಇಂಡಿಯಾ ವತಿಯಿಂದ ಏರ್ಪಡಿಸಲಾದ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ ಶೀಪ್ ಸ್ಪರ್ಧೆಗೆ ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳ ತಂಡ ಭಾಗವಹಿಸಲು ದಿನಾಂಕ 04/07/2024 ರಂದು ಒಟ್ಟು 9 ವಿದ್ಯಾರ್ಥಿಗಳು ಹುಡುಗರು 5 ಜನ , ಹುಡಿಗಿಯರು 4 ಜನ ಅವರ ಜೊತೆ ಸಿಬ್ಬಂದಿ ವರ್ಗ ಬೆಂಗಳೂರಿಗೆ ತೆರಳುತ್ತಿದ್ದಾರೆ
ಗ್ಲೊಬಲ್ ಸೈನಿಕ ಅಕಾಡೆಮಿಯ ಅದ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ ಅವರು ರೈಲ್ವೆ ಸ್ಟೇಶನ್‍ನಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗಳಿಸಿ ನಮ್ಮ ಶಾಲೆಗೆ ಮತ್ತು ಬೀದರ್‍ಗೆ ಕೀರ್ತಿಯನ್ನು ತನ್ನಿ ನಿಮ್ಮ ಸತತ ಪ್ರಯತ್ನ ಮತ್ತು ಏಶಿಯನ್ ಗೋಲ್ಡ್ ಮೆಡಲ್ ಟಿ.ಸಿ. ಪಲಂಗಪ್ಪಾ ಅವರ ಮಾರ್ಗದಶನ ವಿಫಲವಾಗಬಾರದು ಗೆದ್ದು ಬನ್ನಿ ಮಕ್ಕಳೇ ಎಂದು ಶುಭ ಹಾರೈಸಿದರು. ಕಳೆದ ಮೂರು -ನಾಲ್ಕು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಶೋಟಿಂಗ್ ಸ್ಪರ್ಧೆಗೆ ನಮ್ಮ ಶಾಲೆಯ ಮಕ್ಕಳು ಪ್ರತಿ ಸ್ಪರ್ಧೆಗೆ ಹೋಗುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರುÀ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಳೆದ ವರ್ಷ ಗೆದ್ದು ಪದಕವನ್ನು ತಂದಿದ್ದಿರಿ ಈ ವರ್ಷವುಕೂಡ ಪದಕವನ್ನು ತರುತ್ತಿರಿ ಎಂದ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು
ಈ ವೇಳೆ ಶಾಲೆಯ ಮುಖ್ಯಶಿಕ್ಷಕರಾದ ಜ್ಯೋತಿರಾಗ, ಸುಬೇದಾರ ಮಡೇಪ್ಪ, ಡಾ.ಗಹನಿನಾಥ ಪಾಟೀಲ, ಅಂಜಲಿ ಸ್ವಾಮಿ, ಶ್ರೀ ಅಶೋಕ ಪಾಟೀಲ, ಶ್ರೀಮತಿ ನೇಹಾ ಕೀರ್ತಿ, ಶಿಕ್ಷಕರು, ಪಾಲಕರು, ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು