ಶರಣ, ಸುಫಿ ಸಂತರ ನಾಡಲ್ಲಿ ಸೇವೆ ಮಾಡಿದ್ದು ನನ್ನ ಪುಣ್ಯ: ಚನ್ನಬಸವಣ್ಣ ಎಸ್.ಎಲ್
ಬೀದರ್:ಜು.5: ಬೀದರ ಜಿಲ್ಲೆ ಶರಣರ ಸೂಫಿ ಸಂತರ, ಮಹ್ಮದ್ ಗವಾನ್ ನಡೆದಾಡಿದ ಭೂಮಿಯಿದೆ. ಇಂತಹ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ನನ್ನ ಅಧಿಕಾರಾವಧಿಯಲ್ಲಿ ಇಲ್ಲಿಯ ಜನರ ಸಹಕಾರ ನನಗೆ ಭಾವುಕನನ್ನಾಗಿ ಮಾಡಿದೆ ಎಂದು ವರ್ಗಾವಣೆಗೊಂಡ ಪೆÇಲೀಸ್ ಅಧೀಕ್ಷಕರಾದ ಚನ್ನಬಸವಣ್ಣ ಎಸ್‍ಎಲ್ ತಿಳಿಸಿದರು.
ನಗರದ ಜಿಲ್ಲಾ ಪೆÇಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಹಾಲಿ ಎಸ್‍ಪಿ ಪ್ರದೀಪ್ ಗುಂಟಿ ಅವರಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಎಸ್‍ಪಿ ಚನ್ನಬಸವಣ್ಣ ಎಸ್‍ಎಲ್ ಅವರಿಗೆ ಆಯೋಜಿಸಿದ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಭಾರತದಲ್ಲಿ ಬೀದರ ಇದೆ. ಆದರೆ ಬೀದರನಲ್ಲಿ ಇಡೀ ಭಾರತವೇ ಅಡಗಿದೆ. ನಾನು ಇಲ್ಲಿಂದ ಸಂತೋಷದಿಂದ ಹೋಗುತ್ತಿದ್ದೇನೆ. ಇಲ್ಲಿ ಸಲ್ಲಿಸಿದ ಸೇವೆ ನನಗೆ ಆತ್ಮತೃಪ್ತಿ ತಂದಿದೆ ಎಂದರಲ್ಲದೆ ತಮ್ಮ ಮಾತಿನುದ್ದಕ್ಕೂ ಬಸವಣ್ಣನವರ ವಚನ ಉಲ್ಲೇಖಿಸಿದ ಚನ್ನಬಸವಣ್ಣ ಅವರು ಸಂಬಂಧಿಕರು ಬಂದರೆ ಸಮಯವಿಲ್ಲವೆನ್ನಿ, ಪ್ರಜೆಗಳು ಬಂದರೆ ತಳಿರುತೋರಣ ಕಟ್ಟಿ ಸ್ವಾಗತಿಸಿ ಎಂದಿದ್ದಾರೆ ಎಂದರು