ಯುವಕರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ: ನ್ಯಾಯವಾದಿ ಅವಟಿ
ವಿಜಯಪುರ,ಜು.5: ಯುವಕರು ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಸಂಘ- ಸಂಸ್ಥೆಗಳನ್ನು ಸ್ಥಾಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ದಾನೇಶ ಅವಟಿ ಸಲಹೆ ನೀಡಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯವರು ನಗರದ ಇರಾನಿ ಕಾಲೋನಿಯಲ್ಲಿ ಗುರುವಾರ ಏರ್ಪಡಿಸಿದ್ದ “ಯುವಕರಿಗೆ ಕಾನೂನು ಅರಿವು ಕಾರ್ಯಕ್ರಮ” ದಲ್ಲಿ ಮುಖ್ಯ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು, ನಗರದ ಕೊಳಚೆ ಪ್ರದೇಶದ ಯುವಕರಲಿ ್ಲಗ್ರಾಮೀಣ ಭಾಗದ ಯುವಕ, ಯುವತಿಯರು ತಮಗಿರುವ ಹಕ್ಕು-ಬಾಧ್ಯತೆಗಳನ್ನು. ಸರ್ಕಾರದ ಯೋಜನೆಗಳನ್ನು ಅರಿತುಕೊಂಡು ವಿವಿಧ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗಾಗಿ ವೈಯಕ್ತಿಕ ಸಾಲ, ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮ ಸಂಯೋಜಕ ರವಿ ದೊಡಮನಿ ಮಾತನಾಡಿ, ಶಿಕ್ಷಣ, ಸಂಘಟನೆ, ಸಮಾಜಸೇವೆ ಯುವಕರ ಬೆಳವಣಿಗೆಯ ಮೂಲ ಮಂತ್ರವಾಗಿದೆ. ಕೆಲವು ಯುವಕರು ಭಾμÉ, ಶಿಕ್ಷಣ, ಕಾನೂನು, ಸಂಘಟನೆ ಅರಿವಿನ ಕೊರತೆಯಿಂದ ಕೀಳರಿಮೆಯಿಂದ ಬಳಲುತ್ತಿದ್ದು, ಅವುಗಳನ್ನು ಪರಿಹರಿಸಲು ಅನೌಪಚಾರಿಕ ಶಿಕ್ಷಣ ಸಂಸ್ಥೆಯವರು ಸದಾಕಾಲ ತಮಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ, ಸಂಘ ಸಂಸ್ಥೆಗಳ ಸ್ಥಾಪನೆ, ಆರ್ಥಿಕ, ಕಾನೂನು, ವೈದ್ಯಕೀಯ ಹಲವಾರು ನೆರವು, ಜಾಗೃತಿ ಕಾರ್ಯಕ್ರಮ ಮೂಡಿಸುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಅಬಿದ ಇರಾನಿ, ಸಾಧಿಕ್, ಗರೀಬಹುಸೇನ, ಅನ್ವರ, ಜಾಫರ್, ಪೀದಾ ಇರಾನಿ, ಕಾಶಿಮ್ ಅಲಿ, ಅಬ್ಬಾಸ ಅಲಿ, ಬಾಬಾ ಇರಾನಿ, ಹೈದರ್ ಇರಾನಿ, ಬಿಲಾಲ ಇರಾನಿ, ನಿಸಾರ ಇರಾನಿ ಇತರರು ಇದ್ದರು.
ರವಿ ದೊಡಮನಿ ಸ್ವಾಗತಿಸಿದರು. ಸಾಧಿಕ ಇರಾನಿ ವಂದಿಸಿದರು.