ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಶಿಬಿರ
ಇಂಡಿ : ಜು.5:ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಕೂಲಿ ಕಾರ್ಮಿಕರಿಗೆ ಅರೋಗ್ಯ ತಪಾಸಣೆ ಮಾಡಲಾಯಿತು. ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅದಿಕಾರಿಗಳು ಕೂಲಿ ಕಾರ್ಮಿಕರ ಬಿಪಿ ,ಶುಗರ್ , ತೂಕ , ಟಿಬಿ ಹಾಗೂ ಇತರ ತಪಾಸಣೆ ಮಾಡಿ ಮಾತ್ರೆಗಳನ್ನು ನೀಡಿದರು . 88 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ತಪಾಸಣೆ ಮಾಡಿ , ಆರೋಗ್ಯ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಬದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಶ್ರೀ ಸಿ ಜಿ ಪಾರೆ , ಕಾರ್ಯದರ್ಶಿ ಮಲ್ಲಿಕಾರ್ಜುನ ಚೆನ್ನಶೆಟ್ಟಿ , ಅಊಔ ಶ್ರೀ ವಿರೇಶ ಹಿರೇಮಠ ,
ಗ್ರಾಮ ಕಾಯಕ ಮಿತ್ರರು , ಆಶಾ ಕಾರ್ಯಕರ್ತೆಯರು ಕೂಲಿ ಕಾರ್ಮಿಕರು ಇದ್ದರು.