ಸಾರ್ವಜನಿಕ ಆಸ್ಪತ್ರೆಗೆ ಅವಶ್ಯಕ ಬೇಡಿಕೆ ಈಡೇರಿಕೆಗೆ ಶಾಸಕ ಬಿ.ಆರ್. ಭರವಸೆ
ಆಳಂದ:ಜು.5: ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯವನ್ನು ಇದೇ ರೀತಿ ಮುಂದುವರೆಸಬೇಕು. ಆಸ್ಪತ್ರೆ ಸಿಬ್ಬಂದಿಗಳ ಅಗತ್ಯ ಎಲ್ಲಾ ಅವಶ್ಯಕ ಬೇಡಿಕೆಗಳನ್ನು ಅನುದಾನ ಒದಗಿಸಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶೇಷ ಇಂಜೆಕ್ಸನ್ ವಿತರಣೆಗೆ ಚಾಲನೆ ನೀಡಿದ ಬಳಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರು ಆಸ್ಪತ್ರೆಗೆ ಮತ್ತು ಸಿಬ್ಬಂದಿಗಳಿಗೆ ಅವಶ್ಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಲಿಖಿತವಾಗಿ ಸಲ್ಲಿಸಿದ ಮನವಿ ಸ್ವೀಕರಿಸಿ ಶಾಸಕರು ಮಾತನಾಡಿದರು.
ಆಸ್ಪತ್ರೆಯ ಆವರಣದಲ್ಲಿ ತೀರ್ವತೆಯಾಗಿ ಅಂತರಜಾಲ ಸಮಸ್ಯೆಯಿರುವುದರಿಂದ ಆನಲೈನ್ ಸಮಸ್ಯೆ ಇರುವುದರಿಂದ ಬಿ.ಎಸ್.ಎನ್.ಎಲ್ ಟಾವರ ಅಳವಡಿಸಬೇಕು.
ವೈದ್ಯರು, ಸಿಬ್ಬಂದಿ ವರ್ಗದವರಿಗೆ ಊಟ ಮತ್ತು ಉಪಹಾರಕ್ಕಾಗಿ ಡೈನಿಂಗ ಹಾಲ್ ನಿರ್ಮಿಸಿಕೊಡಬೇಕು. ಡಯಾಲಿಸಸ್ ಒವರ್ ಹೆಡ್ ಟ್ಯಾಂಕ್‍ಗಳಿಗೆ ಹಾಗೂ ಕುಡಿಯುವ ನೀರಿನ ಟ್ಯಾಂಕ್‍ಗಳ ಮೇಲೆ ಛಾವಣಿ ನಿರ್ಮಾಣ, ಆಸ್ಪತ್ರೆಯ ಆವರಣದಲ್ಲಿ ಸಿಬ್ಬಂದಿ ಮತ್ತು ಸಾಮಾನ್ಯ ಜನರ ವಾಹನ ನಿಲುಗಡೆ ವ್ಯವಸ್ಥೆ, ಆಸ್ಪತ್ರೆಯ ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗಾಗಿ ಕ್ರೀಡಾ ಮೈದಾನ, ಆಸ್ಪತ್ರೆಯ ಮೇಲ್ಬಾವಣಿಯ ಮೇಲೆ ಸೋಲಾರ ಅಳವಡಿಕೆ ಮತ್ತು ಈ ಆಸ್ಪತ್ರೆಗೆ ಪೂರ್ತಿಯಾಗಿ ಹೋಸ ಎಲೆಕ್ನಿಕಲ್ ವೈರಿಂಗ್ ಕೈಗೊಳ್ಳಬೇಕಾಗಿದೆ. ಆವರಣದಲ್ಲಿ ಬೀದಿದೀಪ (Street Light) ಆವರಣಕ್ಕೆ ಅನುಗುಣವಾಗಿ ಬೀದಿ ದೀಪ ಅಳವಡಿಸಲು ಕ್ರಮ ಹಾಗೂ ಆಸ್ಪತ್ರೆಗೆ ಸುಣ್ಣ-ಬಣ್ಣ ಕೆಲಸ, ಹೆರಿಗೆ ಕೋಣೆಗೆ ನಸಿರ್ಂಗ ಸ್ಟೆಷನ್ ಅಳವಡಿಸಬೇಕು. ಆಸ್ಪತ್ರೆಯಲ್ಲಿ ಪದೇ ಪದೇ ಗಲಾಟೆಗಳಾಗುತ್ತಿರುವುದರಿಂದ ಈ ಆಸ್ಪತ್ರೆಗೆ ಒಂದು ಔP ಸ್ಥಾಪಿಸುವ ಕುರಿತಾದ ಬೇಡಿಕೆಯ ಪತ್ರವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರು ಶಾಸಕರಿಗೆ ಸಲ್ಲಿಸಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕರು ಈ ಕುರಿತು ಅನುದಾನ ಒದಗಿಸಿ ಅವಶ್ಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಉಮಾಕಾಂತ, ಡಾ. ನಿಲೇಶ ಪಾಟೀಲ, ರಾಜ್ಯ ಸರ್ಕಾರಿ ನೌಕರ ತಾಲೂಕು ಸಂಘದ ಶ್ರೀಕಾಂತ ಕೆಂಗೇರಿ ಇತರರು ಇದ್ದರು.