ನೀರು ಕಾಯಿಸಿ ಸೊಸಿ ಕುಡಿಯಿರಿ: ಸಿ.ಫಕೃದ್ದಿನ್
ವಾಡಿ: ಜು.5:ನದಿ ನೀರನ್ನು ಶುದ್ಧೀಕರಣ ಘಟಕದಲ್ಲಿ ಶುದ್ಧಿಕರಿಸಿ ವಾಡಿ ಪಟ್ಟಣಕ್ಕೆ ಪೂರೈಕೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನೀರನ್ನು ಕಾಯಿಸಿ,ಆರಿಸಿ,ಸೋಸಿ ಶುದ್ಧಿಕರೀಸಿ ಕುಡಿಯಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದಿನ್ ಸಾಬ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದ ಭೀಮಾ ನದಿಗೆ ಯತೇಚ್ಛವಾಗಿ ನೀರು ಹರಿದು ಬರುತ್ತಿದೆ. ಮಣ್ಣು, ಕಸ ಹಾಗೂ ಇತರೆ ಘನ ತ್ಯಾಜ್ಯ ವಸ್ತುವನ್ನು ನದಿಗೆ ಸೇರುತ್ತಿದೆ. ಪರಿಣಾಮ ನದಿಯ ನೀರು ಸಹಜವಾಗಿ ಕಲ್ಮಶಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನೀರನ್ನು ಶುದ್ಧಿಕರೀಸಿ ಕುಡಿಯುವುದು ಉತ್ತಮ. ಮಳೆಗಾಲದಲ್ಲಿ ಸಹಜವಾಗಿ ಸೊಳ್ಳೆ, ನೋಣಗಳು ಸಂತಾನೋತ್ಪತ್ತಿ ವಾಗುತ್ತವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಲೂ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ತೊಟ್ಟಿಗಳು, ಡ್ರಮ್ ಮುಚ್ಚಿಡಬೇಕು ಟೈರುಗಳಲ್ಲಿ, ಟೆಂಗಿನ ಚಿಪ್ಪುಗಳಲ್ಲಾಗಲ್ಲಿ ಅಥವ ಹೂವಿನ ಕುಂಡ, ಮಡಿಕೆಯ ಒಡೆದ ಚಿಪ್ಪಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ನೀರಿನಲ್ಲಿ, ಲಾರ್ವಾ ಉತ್ಪತ್ತಿಯಾಗಿ ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ನೈರ್ಮಲ್ಯ ಹಾಗೂ ನೀರಿನ ಸಮಸ್ಯೆಗಳು ಕಾಣಿಸಿದರೆ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.