2400 ಬಡ ಜನರಿಗೆ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಅರಿವು
ಬೀದರ: ಜು.5:ಬ್ರೀಡ್ಸ್ ಬೆಂಗಳೂರು ಮತ್ತು ಡಾನ್ ಬೋಸ್ಕೊ ಬೀದರ ಹಾಗೂ ಫಾದರ್ ಸ್ಟೀವನ್ ಲಾರೆನ್ಸ್ ಅವರ ಮಾರ್ಗದರ್ಶನದ ಮೇರೆಗೆ ಮೊಬೈಲ್ ಕ್ಲೀನಿಕ್ ತಂಢದ ವತಿಯಿಂದ ಬೀದರ ಜಿಲ್ಲೆಯಲ್ಲಿ 30 ಗ್ರಾಮಗಳು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದೂರವಿರುವ ಊರುಗಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಿಲಾಗಿತ್ತು.
ಫೆಬ್ರವರಿಯಿಂದ ಜುಲೈವರೆಗೆ ಸುಮಾರು 4450ಜನರಿಗೆ ಆರೋಗ್ಯದ ಅರಿವು ಮೂಡಿಸಿದ್ದರೆ. ಆರೋಗ್ಯದ ಅರಿವಿನ ಕಾರ್ಯಕ್ರಮದ ಮುಖಾಂತರ 2400 ಬಡ ಜನರಿಗೆ ಜನರಲ್ ತಪಾಸನೆ ಮತ್ತು ಆರೋಗ್ಯದ ಅರಿವಿನ ಮುಖಾಂತರ ಹೆಮ್ಮೆಗೆ ಪಾತ್ರವಾಗಿದೆ.
ಸಿಕೆಂದ್ರಪೂರ ಗ್ರಾಮದಲ್ಲಿ ಆರೋಗ್ಯದ ಅರಿವು ಮೂಡಿಸಲಾಗಿದೆ. ಹಾಗೂ 83 ಜನರಿಗೆ ಜನರಲ್ ತಪಾಸನೆ ಮುಖಾಂತರ ಸಮಾಜ ಸೇವೆ ಮಾಡುವುದರಲ್ಲಿ ಮತ್ತು ಬ್ರೀಡ್ಸ್ ಬೆಂಗಳೂರು ಮತ್ತು ಡಾನ್ ಬೋಸ್ಕೊ ಬೀದರ ಫಾದರ್ ಸ್ಟೀವನ್ ಲಾರೆನ್ಸ್ ಮತ್ತು ಅಜೀಮ ಪ್ರೇಮಜಿ ಫೌಂಡೆಷನ್ ಜಿಲ್ಲಾ ಸಂಯೋಜಕರು ಅಕ್ಷಯ ಮತ್ತು ಮೋಬೈಲ್ ಕ್ಲೀನಿಕನ ಸಿಬ್ಬಂದಿಗಳಾದ ಥಾಮಸ್, ಸೈಮನ್ ರಾಜೇಶ್ರೀ ಅಶೋಕ ಜಾಯ್ ಮತ್ತು ಚಟುವಟಿಕೆ ಕೇಂದ್ರದ ಸಿಬ್ಬಂಧಿಗಳಾದ ಸುನೀತಾ, ಚಲುವರಾಣಿ, ವೇರೋನಿಕಾ, ಕಲ್ಪನಾ ಮತ್ತು ಡ್ಯಾನಿಯಲ್ ಹಾಗೂ ಆಶಾ ಕಾರ್ಯಕರ್ತಿಯರು ಹಾಗೂ ಸರ್ಕಾರಿ ಶಾಲೆಯ ಸಿಬ್ಬಂದಿಗಳು ಭಾಗಿಯಾಗಿದರು.