ರಾಮ ಮಂದಿರ ಉದ್ಘಾಟನೆ ತರಾತುರಿಯಲ್ಲಿ ಆಗಿಲ್ಲ: ಪೇಜಾವರ ಶ್ರೀ
ವಿಜಯಪುರ,ಜು.5: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ತರಾತುರಿಯಲ್ಲಿ ಆಗಿದೆ. ರಾಮ ಮಂದಿರ ಸೋರುತ್ತಿದೆ ಎನ್ನುವುದು ಸರಿಯಲ್ಲ. ಮೇಲ್ಚಾವಣೆ ಕಾಮಗಾರಿ ಇನ್ನೂ ಆಗಬೇಕಿದೆ. ಅದಕ್ಕೆ ಸಮಯ ಬೇಕಾಗುತ್ತದೆ ಎಂದು ಉಡುಪಿು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಆಗಿಲ್ಲ. ಮೇಲ್ಛಾವಣಿ ಕಾಮಗಾರಿ ಇನ್ನೂ ಆಗಬೇಕಿದೆ. ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಮೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಬಡತನ ಪರಿಸ್ಥಿತಿಯಲ್ಲಿ ಇರುವ ಜನರು ಆಮಿಷೆಗೆ ಬಲಿಯಾಗಿ ಮೋಸ ಹೋದರು ಎಂದು ಹೇಳುವ ಮೂಲಕ ಗ್ಯಾರಂಟಿಯಿಂದ ಸೋಲಾಯಿತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಟೀಕಿಸಿದರು. .
ಸ್ವಾಮೀಜಿಗಳು ಸಿಎಂ, ಡಿಸಿಎಂ ಹುದ್ದೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮದ ವಿರುದ್ಧ ನಾವು ಹೋಗಲ್ಲ. ಡಿಸಿಎಂ ಹುದ್ದೆ ಬ್ರಾಹ್ಮಣರಿಗೆ ಕೊಡಿ ಎಂದು ನಾವು ಕೇಳಲ್ಲ. ಸಂವಿಧಾನ ಬದ್ಧವಾಗಿ ಪ್ರಸ್ತಾಪ ಇರಬೇಕು. ಜಾತಿವಾರು ಡಿಸಿಎಂ ಹುದ್ದೆ ಸ್ವಾಮೀಜಿಗಳ ಬೇಡಿಕೆಗೆ ಪರೋಕ್ಷವಾಗಿ ವಿರೋಧಿಸಿದರು.
ಹಿಂದು ಧರ್ಮದ ಬಗ್ಗೆ ರಾಹುಲ್ ಗಾಂಧಿ ಅವಹೇಳನ ವಿಚಾರ ಬಗ್ಗೆ, ಸಹಿಷ್ಣುರಾಗಿರುವವರನ್ನು ಕೆಣಕುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ. ಸಹಿಷ್ಣರನ್ನು ಕೆಣಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಪಂಗಡ ಪಂಗಡಗಳ ಮಧ್ಯೆ ಬೆಂಕಿ ಹಚ್ಚುವುದು ಸರಿಯಲ್ಲ. ಬೇಜವಾಬ್ದಾರಿ ಹೇಳಿಕೆ ಕೊಡುವುದು ಒಳ್ಳೆಯದಲ್ಲ. ಸಮಾಜ ಇಂತಹವರಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.