ಸುಲ್ತಾನಬಾದ್ ಪಂಚಾಯತ ಅಧ್ಯಕ್ಷರಾಗಿ ಸುಧಾರಾಣಿ ಜೈಕುಮಾರ ಅವಿರೋಧ ಆಯ್ಕೆ
ಹುಮನಾಬಾದ: ಜು.5: ತಾಲೂಕಿನ ಸುಲ್ತಾನಬಾದ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷೆಯಾಗಿ ಸುಧಾರಾಣಿ ಜಯಕುಮಾರ ಆಯ್ಕೆಯಾಗಿದ್ದಾರೆ.ಗ್ರಾಪಂ. ಅಧ್ಯಕ್ಷ ಸ್ಥಾನಕ್ಕೆ ಶಿವಕಾಂತ ಸಂಗಮೇಶ ರಾಜೀನಾಮೆ ನೀಡಿದ್ದ ಹಿನ್ನಲೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಗೆ ಸಂಬಧಿಸಿದತೆ ಸಾಮಾನ್ಯ ಸ್ಥಾನಕ್ಕೆ ಕೇವಲ ಒಂದು ನಾಮಪತ್ರ ಬಂದಿದ್ದ ಕಾರಣ ಅವಿರೋಧವಾಗಿ ಸುಧಾರಾಣಿಗೆ ನೂತನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ದೀಪಿಕಾ ನಾಯ್ಕರ್ ತಿಳಿಸಿದರು.
ನೂತನ ಅಧ್ಯಕ್ಷೆಯಾಗಿ ಸುಧಾರಾಣಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಗ್ರಾಮ ಪಂಚಾಯತ ಮುಂಭಾಗದ ಮುಖ್ಯರಸ್ತೆಯಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಓಂಕಾರ ರಾಮಚಂದ್ರ, ಸದಸ್ಯರಾದ ಸುಲೇಮ್ಮ ಭದ್ರಪ್ಪ, ಲಕ್ಷ್ಮಿಬಾಯಿ ಬಾಬುರಾವ ಮಲ್ಲಿಕಾರ್ಜುನ್ ವಿಠಲರಾವ, ಅಶೋಕ ಮಾರುತಿ, ಸೋಮನಾಥ ಬಸವರಾಜ, ಸವಿತಾ ರಾಜಕುಮಾರ, ವಿಜಯಕುಮಾರ ವೈಜಿನಾಥ, ಶೋಭಾವತಿ, ಮುರ್ತುಜಾಖಾನ್, ವೈಜಿನಾಥ, ವಿಜಯಕುಮಾರ, ಭಾಗ್ಯಶ್ರೀ, ಜರೀನಾ ಬಾನು, ರಾಯಪ್ಪ, ಅರ್ಚನಾ, ಗ್ರಾಪಂ. ಪಿಡಿಒ ಸಿದ್ಧಾರ್ಥ, ಪ್ರಮುಖರಾದ ಬಾಬಾ ಖಾನ್, ಬಸಯ್ಯ ಸ್ವಾಮಿ, ರಾಜೇಂದ್ರ ಉಸ್ತರ್ಗಿ, ರೋಷನ್ ಸಿಂಧೆ ಸೇರಿ ಅನೇಕರಿದ್ದರು