ಜನಸ್ಪಂದನ: ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದ ಡಿಸಿ
ಸೇಡಂ,ಜು,05: ತಾಲೂಕಿನಲ್ಲಿರುವ ರೈತರ, ವಿದ್ಯಾರ್ಥಿಗಳ ಸಮಸ್ಯೆ, ಗ್ರಾಮೀಣ ಮೂಲಭೂತ ಸೌಕರ್ಯಗಳು, ಸೇರಿದಂತೆ ಅನೇಕ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡುವಂತಹ ಕಾರ್ಯಕ್ರಮಕ್ಕೆ ತಾಲೂಕ ಆಡಳಿತವೂ ಜಿಲ್ಲಾಧಿಕಾರಿಗಳ ಆಗಮನದ ಬಗ್ಗೆ ಪಟ್ಟಣ ಸೇರಿದಂತೆ ಗ್ರಾಮಾಂತರಗಳಲ್ಲಿಯೂ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಪ್ರಚಾರಗೊಳಿಸುವಲ್ಲಿ ಹಾಗೂ ತಾಲೂಕ ಸೌಧದಲ್ಲೇ ಆಯೋಜಿಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಮುಂದಾದರೂ ಜನಸ್ಪಂದನಾ ಕಾರ್ಯಕ್ರಮವು ಮಾಡುವಾಗ ಕಾರ್ಯಕ್ರಮಕ್ಕೆ ಮುಂಚಿತವಾಗಿ ಹೆಚ್ಚಿನ ಪ್ರಚಾರ ಹಾಗೂ ಜಾಹಿರಾತು ಮುಖಾಂತರ ಜನರಿಗೆ ತಲುಪಿಸುವಂತಹ ಆಗಬೇಕು, ನಂತರ ಕಾರ್ಯಕ್ರಮ ಇಟ್ಟುಕೊಳ್ಳುವುದರಿಂದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದಿದ್ದಾರೆ.
ಜನ ಸ್ಪಂದನ ಕಾರ್ಯಕ್ರಮದ ಪ್ರಚಾರ ಇನ್ನು ಹಳ್ಳಿ ಹಳ್ಳಿಗೆ ತಲುಪಿದರೆ ಬಹಳಷ್ಟು ಉಪಯೋಗ ವಿರತಿತ್ತು , ಆದ್ರೂ ಒಳ್ಳೆಯ ರೀತಿ ಕಾರ್ಯಕ್ರಮ ಜರುಗಿದೆ, ಸರಕಾರದ ಒಳ್ಳೆಯ ನಿರ್ಧಾರ ದಿಂದ ಇಂದು ಡಿಸಿ ಅವರು ಸಹ ನಮ್ಮ ತಾಲೂಕಿಗೆ ಬಂದು ಸಮಸ್ಯಕೆಳುವ ಹಾಗೆ ಮಾಡಿದಾರೆ , ಬಡವರ ಪರ ಕಾಳಜಿ ವಹಿಸಿದ ಸರಕಾರಕ್ಕೆ ಧನ್ಯವಾದಗಳು
ಹೌದು ಇಂದಿನ ಜನ ಸ್ಪಂದನ ಕಾರ್ಯಕ್ರಮ ತಾಲ್ಲೂಕಿನ ಎಲ್ಲ ಹಳ್ಳಿ ಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ ಮತ್ತು ಕೆಲವರು ಪತ್ರಿಕಾ ಗೋಷ್ಟಿ ತಿಳಿದು ಕೊಂಡು ಬಂದವರು ಅಷ್ಟೆ ಇಂದಿನ ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಬಾಗಿ ಯಾಗಿದರೆ ಮತ್ತು ಸಮಯ ಕೆ ಹಾಗಿರುವುದಿಲ್ಲ.
ವರದ ಸ್ವಾಮಿ ಬಿ ಹೀರೆಮಠ
ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ
ಜನಸ್ಪಂದನ ಕಾರ್ಯಕ್ರಮ ಅಂದರೆ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಡಂಗೂರ ಮುಖಾಂತರ ತಿಳಿಸಬೇಕು ನಮಗೆ ಗೊತ್ತಾಗುತ್ತೆ ಪತ್ರಿಕೆ ಬಂದ್ರೆ ಗೊತ್ತಿರುವವರು ಮಾತ್ರ ಬರ್ತಾರೆ ಎಲ್ಲಾ ಕಡೆ ಗೊತ್ತಾಗಬೇಕು ಎಂಬ ನಮ್ಮ ಅನಿಸಿಕೆ
ಸಾರ್ವಜನಿಕರಿಗೆ ಮಾಹಿತಿಯನ್ನು ಕೇವಲ ಒಂದು ದಿನ ಇರುವಾಗ ಮಾಹಿತಿ ನೀಡಿರುವುದು.ಜಿಲ್ಲಾಧಿಕಾರಿಗಳು ಬರುವುದನ್ನು ಪ್ರಚಾರ ಮಾಡದೇ ಕಾಟಚಾರಕ್ಕೆ ಸೇಡಂ ಅಸಾಯಕಯುಕ್ತರು,ಸೇಡಂ ತಹಸೀಲ್ದಾರರು ಹಾಗೂ ದಂಡ ಅಧಿಕಾರಿಗಳು ವಿಫಲವಾಗಿರುವುದು ಖೇದದ ಸಂಗತಿ.
ಜನಸ್ಪಂದನ ಸಭೆ ಜನರ ಮಧ್ಯದಲ್ಲಿ ಮಾಡುವುದು ಜನಸ್ಪಂದನ ಕೊಠಡಿಯಲ್ಲಿ ಮಾಡುವುದು ಜನಸ್ಪಂದನ ಅಲ್ಲ ಜನರ ಸಮಸ್ಯೆಗಳನ್ನು ನೆರವೇರಿಸುವುದೇ ಜನಸ್ಪಂದನ ಅಂತಾರೆ.
ಹೋರಾಟಕ್ಕೆ ವರ್ತಕರ ಸಂಘದ ಬೆಂಬಲ
ಸೇಡಂ ಜನಹಿತ ರಕ್ಷಣಾ ಸಮಿತಿಯ ಹೋರಾಟಕ್ಕೆ ವರ್ತಕರ ಸಂಘ ಬೆಂಬಲ ನೀಡಿದೆ. ಅಲ್ಲದೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ಬಲಿಷ್ಠ ಮಾಡುವುದಾಗಿ ಸಂಘದ ಅಧ್ಯಕ್ಷ ಶಿವಕುಮಾರ ಬೋಳಶೆಟ್ಟಿ ತಿಳಿಸಿದ್ದಾರೆ.
ಶಿವಕುಮಾರ್ ನಿಡಗುಂದಾ
ಜನಹಿತ ರಕ್ಷಣಾ ಸಮಿತಿಯ ಹೋರಾಟಗಾರ ಸೇಡಂ