ಇದು ನಿಮ್ಮವಾಣಿಖಾಸಗೀ ಲೆಔಟ್ ಗೆ   ಹಳ್ಳವೇ ರಸ್ತೆಯಾದರೆ ಯಾರು ಜವಾಬ್ದಾರರು
ಮಾನ್ಯರೇ,
ಇದು ಬಳ್ಳಾರಿ ನಗರದಿಂದ ಅಲ್ಲಿಪುರದ ಕಡೆಗೆ ಹೋಗುವಾಗ ಬರುವ ಹೊಸದಾಗಿ ಮಾಡುತ್ತಿರುವ ಲೇಔಟ್ ಹಾಗಿದೆ.
ಈ ಲೇಔಟ್ ಗೆ ಹೋಗುವ ದಾರಿ ಅಧಿಕೃತವೇ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಇವರು ಮಾಡುತ್ತಿರುವ ಲೇಔಟ್ ಗೆ ಹೋಗುವ ದಾರಿ ಕಂದಾಯ ದಾಖಲೆಗಳ ಪ್ರಕಾರ ಹಳ್ಳ ಇದ್ದೆ.  ಈಗ ಇದು ರಸ್ತೆಯಾಗಿ ಮಾರ್ಪಡು ಮಾಡುತ್ತಿದ್ದಾರೆ.
ಸಂಬಂಧಪಟ್ಟ ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಬೇಕಿದೆ. ಈ ಲೇಔಟ್ ಗೆ ಪರವಾನಿಗೆ ಕೊಟ್ಟಿದ್ದಾರೆಯಾ? ಕೊಟ್ಟಿದ್ದರೆ ಹೇಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತ ಒಮ್ಮೆ ಪರಿಶೀಲನೆ ಮಾಡಲು ಕೆ ಆರ್ ಎಸ್ ಪಕ್ಷ ಒತ್ತಾಯ ಮಾಡುತ್ತದೆ.
ಅಧಿಕೃತ ರಸ್ತೆ ಇಲ್ಲದ ಕಡೆ ಲೇಔಟ್ ಮಾಡಿ ಮಾರಿದರೆ. ಮುಂದೆ  ಸಾಮಾನ್ಯ ಜನರೇ ಮೋಸಹೋಗೋದು, ರಸ್ತೆಗಳಿಗೆ, ಸಾರ್ವಜನಿಕ ಸಾವಲತ್ತಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.
ಅಲ್ಲಿಪುರ ಶ್ರೀನಿವಾಸರೆಡ್ಡಿ, ಬಳ್ಳಾರಿ