ನಂದಿಪುರದಲ್ಲಿ :ಮಣ್ಣೆತ್ತಿನ ಅಮಾವಾಸ್ಯೆ ಮಹಾಪ್ರಸಾದ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.05  ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಗುರುಗಳ ದರ್ಶನ ಆಶೀರ್ವಾದ ಮಹಾಪ್ರಸಾದ ಜರುಗಿತು.
ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮಿ ಹಾಗೂ ಪರಮಪೂಜ್ಯ ಚರಂತೇಶ್ವರ ಸ್ವಾಮಿಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಜರುಗಿದವು.
ಪುಣ್ಯಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿಯವರು ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು. ಗದ್ದಿಕೆರೆ ಹಿರೇಮಠದ ಅಭಿನವ ಚರಂತೇಶ್ವರ ಸ್ವಾಮೀಜಿ, ಸೇವಾ ಸಮಿತಿಯವರು ಇದ್ದರು.
ಪುಣ್ಯಕ್ಷೇತ್ರಕ್ಕೇ ಆಗಮಿಸಿದ ಭಕ್ತರಿಗೆ ಪ್ರತಿನಿತ್ಯ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.