ಹಬೋಹಳ್ಳಿ : ನೀಟ್  ಅಕ್ರಮ ಎಸ್ ಎಫ್ ಐ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.05  ನೀಟ್ ಅಕ್ರಮ ಖಂಡಿಸಿ ಎಸ್ ಎಫ್ ಐ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ಮಾಡಿ ತಾಲೂಕು ಉಪ ತಹಶಿಲ್ದಾರರಾದ ಶಿವಕುಮಾರ್ ಅವರಿಗೆ ಮನವಿ ಪತ್ರ ನೀಡಲಾಯಿತು
ಎಸ್ ಎಫ್ ಐ ತಾಲೂಕು ಸಮತಿ ಅಧ್ಯಕ್ಷ ಜಯಸೂರ್ಯ ಮಾತನಾಡಿ     ಕಳೆದ ಕೆಲವು ವಾರಗಳಿಂದ ನಡೆದ ಘಟನೆಗಳನ್ನು ಗಮನಿಸಾಗ ಮತ್ತೊಮ್ಮೆ ರಾಷ್ಟೀಯ ಪರೀಕ್ಷಾ ಪ್ರಾಧಿಕಾರ ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆಯನ್ನು ಪ್ರದರ್ಶಿಸಿದೆ. ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರೆಶ್ನೆಪತ್ರಿಕೆ ಸೋರಿಕೆ ರಾಷ್ಟ್ರಾದ್ಯಂತ ಸುದ್ದಿ ಮಾಡಿದೆ.
ಜೂನ್ 4 ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ ಮತ್ತು ಪೇಪರ್ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಭಾದಿತರಾಗಿದ್ದರು ಎಂದರು.
ಎಸ್ ಎಫ್ ಐ ನಾ ಮುಖಂಡರಾದ ನಂದಿತ ಮಾತನಾಡಿ ಉನ್ನತ ಶಿಕ್ಷಣದಲ್ಲಿನ ಸಮಸ್ಯೆಗಳು ಅಷ್ಟೇ ಅಲ್ಲದೆ, ಶಾಲಾ ಶಿಕ್ಷಣದ ಸಮಸ್ಯೆಗಳನ್ನು ಪ್ರತ್ಯೇಕಿಸುವಂತಿಲ್ಲ. ಬಿಜೆಪಿ ನೇತೃತ್ವದ ಎನ್ ಡಿ ಎ ಅವಧಿಯಲ್ಲಿ ಶಿಕ್ಷಣಕ್ಕೆ ಸಂಭಂದಪಟ್ಟ ಇಲಾಖೆಗಳಿಗೆ ಬಜೆಟ್ ನಲ್ಲಿ ಹಣ ಕಡಿತ ಮಾಡಿರುವುದು, ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಒಟ್ಟು ದಾಖಲಾತಿಯಲ್ಲಿ ಕುಸಿದಿರುವುದನ್ನು ಕಾಣಬಹುದಾಗಿದೆ ಎಂದರು..
ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಮೇಲಿನ ನಿರಂತರ ದಾಳಿಯನ್ನು ವಿರೋಧಿಸಿ, .ಸಾರ್ವತ್ರಿಕ ಶಿಕ್ಷಣ ವ್ಯೆವಸ್ಥೆಯನ್ನು ಬಲಪಡಿಸಿ, ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು. ಎಂದು ಒತ್ತಾಯಿಸಿ ಸಾವಿರಾರು ವಿದ್ಯಾರ್ಥಿಗಳು   ಹೋರಾಟದಲ್ಲಿ ಪಾಲ್ಗೊಂಡಿದ್ದರು ಸಂಘಟನೆಯ ಸದಸ್ಯರಾದ ದುರುಗೇಶ್ ಮಹೇಶ್ , ಜಗದೀಶ್,ಅಶೋಕ್ , ನಾಗರಾಜ್ , ನಂದಿತ , ಪುಷ್ಪವತಿ,ನಂದಿನಿ,ಸುಲ್ತಾನಾ ಬೇಗಂ , ದಿನೇಶ್, ಅಜಯ್, ಹುಲುಗಪ್ಪ ,ದುರುಗೇಶ್ , ಸೇರಿದಂತೆ ವಿದ್ಯಾನೀಕೆತನ ಪಿಯು ಕಾಲೇಜ್ , ನಂದಿ ಪಿಯು ಕಾಲೇಜ್ , ಗಂಭೀ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು….