ಭಾರೀ ಮಳೆಗೆ ಗುಡ್ಡ ಕುಸಿತ: ಹೆದ್ದಾರಿ ಬಂದ್!
ಶಿವಮೊಗ್ಗ, ಜು.5; ಹೊಸನಗರತಾಲೂಕಿನ ನಗರ ಹೋಬಳಿಯ ಸಮಗೋಡು ಸಮೀಪ ಭಾರೀ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದ ಪರಿಣಾಮ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ-766c ಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.ಹೊಸನಗರ ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಹಲವು ಅವಘಡ ಸೃಷ್ಟಿಸಿದೆ. ಜೆಸಿಬಿ ಯಂತ್ರ ಬಳಸಿ ಮಣ್ಣು ತೆರೆಯುವ ಕಾರ್ಯ ಆರಂಭವಾಗಿದೆ. ಮಳೆಯಿಂದ ಮಣ್ಣು ತೆಗಿಯುವ ಕಾರ್ಯಕ್ಕೆ ಅಡ್ಡಿಯಾಗಿದೆ.