ಸೌಲಭ್ಯ ವಿತರಣಾ ಕಾರ್ಯಕ್ರಮ ಸರಳವಾಗಿ ಸರ್ಕಾರಿ  ಕಾರ್ಯಕ್ರಮಗಳು ಜನತೆಯ ಮನೆ ಬಾಗಿಲಿಗೆ : ಕೆ ನೇಮಿರಾಜ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.05 ಜನತೆಗೆ ಸರಳವಾಗಿ ಸರ್ಕಾರಿ ಕಾರ್ಯಕ್ರಮ ನೇರವಾಗಿ ಮುಟ್ಟುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು ಎಂದು ನಮ್ಮ ಅಧಿಕಾರಿ ವರ್ಗದವರಿಗೆ ಹೇಳಿದ್ದೇನೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಕಾಲೇಜ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯದಲ್ಲಿಯೇ ವಿಶೇಷ ವಿನೂತನ ಉತ್ಥಾನ   ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಕಳೆದ ಬಾರಿ ನನ್ನ ಮೇಲೆ ವಿಶ್ವಾಸ ಇಟ್ಟು ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ನನ್ನ ಮೇಲೆ ಎತ್ತಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆಯದೆ ಕೆಲಸ ನಿರ್ವಹಿಸುತ್ತೇನೆ. ಈ ಒಂದು ವೇದಿಕೆ ಹಲವು ಈಡೇರಿಕೆ ಎಂಬ ಧ್ಯೇಯ ವಾಕ್ಯ ದಡಿ 23 ವಿವಿಧ ಇಲಾಖೆಯ 1760ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಂದೇ ವೇದಿಕೆಯಲ್ಲಿ ಆದೇಶ ಪ್ರತಿ ಸೌಲಭ್ಯಗಳ ಕಿಟ್, ಶಾಲೆಗೆ ಕ್ರೀಡಾಕೂಟ ಸಾಮಗ್ರಿಗಳು, ತ್ರಿಚಕ್ರ ವಾಹನ ಬಸ್ಸು ಸೌಲಭ್ಯ, ಅಂತರ್ಜಾತಿ ವಿವಾಹ, ಆರೋಗ್ಯ, ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಲಾಗುವುದು.  ಕ್ಷೇತ್ರದ ಕುಡಿಯುವ ನೀರು ಸೇರಿದಂತೆ ಪಟ್ಟಣದ ಪುರಸಭೆಯ ಡಬಲ್ ಟ್ಯಾಕ್ಸ್ ನೀತಿಯನ್ನು ರದ್ದುಪಡಿಸಿ ಏಕರೂಪ ತೆರಿಗೆ ಜಾರಿಗೊಳಿಸಲಾಗುವುದು. ಎಂದರು
 ತಾಲೂಕು ಸೇರಿದಂತೆ ಕೊಟ್ಟೂರು ಮರಿಯಮ್ಮನಹಳ್ಳಿ ಭಾಗದ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ವೇದಿಕೆಯಲ್ಲಿ ವಿತರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರಿಗೆ ಅಚ್ಚಕಟ್ಟಾಗಿ ಊಟ ವ್ಯವಸ್ಥೆ ಮಾಡಲಾಗಿತ್ತು.
  ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು  ತಾ ಪಂ ಇ ಒ ಪರಮೇಶ್ವರಪ್ಪ ಸ್ವಾಗತಿಸಿದರು.
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಬಿ ಗಂಗಣ್ಣ, ದೀಪಕ್ ಕಠಾರಿ, ಚೆನ್ನಮ್ಮ ವಿಜಯಕುಮಾರ್, ಮಾಜಿ ಸದಸ್ಯರಾದ ಮೃತ್ಯುಂಜಯ ಬಾದಾಮಿ, ಜೆಡಿಎಸ್ ತಾಲೂಕ್ ಅಧ್ಯಕ್ಷ  ವೈ ಮಲ್ಲಿಕಾರ್ಜುನ, ಕನ್ನಳ್ಳಿ ಚಂದ್ರಶೇಖರ್, ರೋಹಿತ್, ಬನ್ನಿಗೋಳ ವೆಂಕಣ್ಣ, ಚಿತ್ತವಾಡಗಿ ಪ್ರಕಾಶ್, ಬ್ಯಾಟಿ ನಾಗರಾಜ್, ಜಿಎಂ ಜಗದೀಶ್, ಬಡಿಗೇರ್ ಬಸವರಾಜ್  ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆಯ ಎಚ್ ಆಂಜನೇಯ ಹುಲ್ಲಾಳ ಆರೋಗ್ಯ ಇಲಾಖೆಯ ಟಿಎಚ್ಒ ಡಾ ಶಿವರಾಜ್ ಬಿಇಒ ಮೈಲೇಶ್ ಬೇವೂರ್, ಜಿ ಪಂ ಎಇ ಇ ಶಿವಕುಮಾರ್ ನಾಯ್ಕ್ ಇತರರಿದ್ದರು.
 ಕಾರ್ಯಕ್ರಮವನ್ನು ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ, ಶಿವಶಂಕರ ಸ್ವಾಮಿ, ಲೀಲಾ  ನಿರ್ವಹಿಸಿದರು.