ಕೆಎಂಸಿ ಅಧ್ಯಕ್ಷರಾಗಿಡಾ.ಯೋಗಾನಂದರೆಡ್ಡಿ ಆಯ್ಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.05: ಕರ್ನಾಟಕ ವೈದ್ಯಕೀಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಇಲ್ಲಿನ ಮಕ್ಕಳ ತಜ್ಞ  ಡಾ.ಯೋಗಾನಂದರೆಡ್ಡಿ ಜು 2 ರಂದು ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಪರಿಷತ್ತಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ 12 ಜನ ನಿರ್ದೇಶಕರು ಆಯ್ಕೆಯಾಗಿ ಇವರು ಮತ್ತು ನಾಲ್ಕು ವಿಭಾಗಗಳಿಂದ ನೇಮಕಗೊಂಡ ನಾಮ ನಿರ್ದೇಶಿತ ನಾಲ್ಕು ಸದಸ್ಯರು ಇವರನ್ನು ಆಯ್ಕೆ ಮಾಡಿದ್ದಾರೆ.
ಅಂತೆಯೇ ಪರಿಷತ್ತಿನ ಉಪಾಧ್ಯಕ್ಷರಾಗಿ ಮೈಸೂರಿನ ಕ್ಯಾನ್ಸರ್ ತಜ್ಞ ಡಾ.ರವಿ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
ಇವರ ಆಡಳಿತ ಸವಧಿ 5 ವರ್ಷಗಳದ್ದಾಗಿರುತ್ತದೆ. ಬಳ್ಳಾರಿಯಿಂದ  ವೈದ್ಯಕೀಯ ಪರಿಷತ್ ಅಧ್ಯಕ್ಷರಾಗಿದ್ದು ಇವರು ಪ್ರಥಮರಾಗಿದ್ದಾರೆ. ಈ ಹಿಂದೆ ಇವರು ಭಾರತೀಯ ವೈದ್ಯಕೀಯ ಅಸೋಸಿಯೇಷನ್ ನ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇವರಿಗೆ ಇಲ್ಲಿನ ಐಎಂಎ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.