ನೂರಕ್ಕೂ ಹೆಚ್ಚು ಜನರಿಂದ ರಕ್ತದಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.5: ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಬಳಿಯ  ಜೆವಿಎಂಎಲ್ ಪ್ರಾಜೆಕ್ಟ್‌  ಪ್ರದೇಶದಲ್ಲಿ
 ಎಲ್ ಅಂಡ್ ಟಿ ಸಿಬ್ಬಂದಿ ಮತ್ತು ಕಾರ್ಮಿಕರಿಂದ ಹೆನ್ನಿಂಗ್ ಹೊಲ್ಕ್ ಲಾರ್ಸನ್ ಅವರ 107ನೇ ಜನ್ಮ ಶತಾಬ್ದಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಕಂಪನಿಯ ಪ್ರಥಮ ಚಿಕಿತ್ಸಾ ಘಟಕದಲ್ಲಿ ಇದನ್ನು ಜು 4 ರಂದು ಆಯೋಜಿಸಲಾಗಿತ್ತು.  ಯೋಜನೆಯ  ನಿರ್ದೇಶಕ ಯು. ಉಮಾಸಾಥಿಯನ್ ಕಾರಗಯಕ್ರಮ ಉದ್ಘಾಟಿಸಿ, ರಕ್ತದಾನದ ಮಹತ್ವವನ್ನು ತಿಳಿಸಿದರು.
ಶಿಬಿರದಲ್ಲಿ 102 ಜನರು ರಕ್ತದಾನ ಮಾಡಿದರು. ಬಳ್ಳಾರಿ‌ ನಗರದ ಸ್ಪಂದನ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಿತ್ತು.
ಡಾ.ಪ್ರಕಾಶ್ ಮಾಲ್ಯಂ ಮೊದಲಾದವರು ಪಾಲ್ಗೊಂಡಿದ್ದರು.