ತೆರೆದ ಮನೆ ಪಾಠ ಕಾರ್ಯಕ್ರಮ
ನವಲಗುಂದ,ಜು.5: ಪೆÇಲೀಸ್ ಠಾಣೆ ಕೇವಲ ಜನಸ್ನೇಹಿ ಠಾಣೆ ಮಾತ್ರವಲ್ಲ ಮಕ್ಕಳ ಸ್ನೇಹಿ ಠಾಣೆಯಾಗಿಯು ಕರ್ತವ್ಯ ನಿರ್ವಹಿಸುತ್ತಿದ್ದು ಮಕ್ಕಳು ತಮ್ಮ ಹಕ್ಕುಗಳ ಕುರಿತು ಕಾನೂನು ಜ್ಞಾನವನ್ನು ಪಡೆದು ಸುಭದ್ರ ಸಮಾಜ ನಿರ್ಮಾಣಕ್ಕೇ ಅಡಿಪಾಯ ಹಾಕಬೇಕೆಂದು ಪಿ.ಎಸ್.ಐ ಜನಾರ್ಧನ ಭಟ್ರಳ್ಳಿ ಮಕ್ಕಳಿಗೆ ಸಲಹೆ ನೀಡಿದರು.
ನವಲಗುಂದ ಪೆÇಲೀಸ್ ಠಾಣೆಯಲ್ಲಿ ತೆರೆದ ಮನೆ ಪಾಠ ಕಾರ್ಯಕ್ರಮದಲ್ಲಿ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು ಕಾಯ್ದೆ, ಬಾಲ್ಯ ವಿವಾಹ, ಪೆÇೀಕ್ಸೋ ಕಾಯ್ದೆ, ಮಕ್ಕಳ ಸಹಾಯವಾಣಿ, ಸೈಬರ್ ಹೆಲ್ಪಲೈನ್, ತುರ್ತು ಸೇವೆಯ ಹೆಲ್ಪ್ ಲೈನ್ ಹಾಗೂ ಬಾಲ ಕಾರ್ಮಿಕರ, ಮತ್ತು ಅಪರಾಧ ಪ್ರಕರಣಗಳ ಬಗ್ಗೆ ಸಮಗ್ರ ಕಾನೂನು ತಿಳುವಳಿಕೆ ನೀಡಿದರು.
ಸರ್ಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಿ.ಜಿ ಹುಲ್ಲೂರ ಮಾತನಾಡಿ ಇವತ್ತು ಜನಸ್ನೇಹಿ ಪೆÇಲೀಸ್ ಠಾಣೆಯಲ್ಲಿ ಆಯೋಜಿಸಿದ ತೆರೆದ ಮನೆ ಪಾಠ ಕಾರ್ಯಕ್ರಮದಿಂದ ನಮ್ಮ ಶಾಲೆಯ ಮಕ್ಕಳಿಗೆ ಅವರ ಹಕ್ಕುಗಳ ಕುರಿತು ಬಹಳ ತಿಳುವಳಿಕೆ ಪಡೆದರು, ಪೆÇಲೀಸ್ ಠಾಣೆ ಎಂದರೆ ಭಯ ಪಡುವಂತಹ ಇಲಾಖೆ ಅಲ್ಲ, ಅದು ನಮ್ಮೆಲ್ಲರ ರಕ್ಷಣೆಗಾಗಿ ಇರುವಂತಹ ಒಂದು ಭದ್ರವಾದ ಕೋಟೆಯಾಗಿದೆ ಎಂದರು.
ಇದೆ ವೇಳೆ ಸರ್ಕಾರಿ ಉರ್ದು ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಆಡಳಿತ ಮಂಡಳಿ ವತಿಯಿಂದ ರಾಣೆಬೆನ್ನೂರಿನ ಜೆ.ಎಂ.ರಾಜಶೇಖರ ಅವರು ಬರೆದ ಮಾಹಿತಿ ಹಕ್ಕು ದರ್ಬಾರ್ ಪುಸ್ತಕವನ್ನು ಸಿ.ಪಿ.ಐ ರವಿಕುಮಾರ ಕಪ್ಪತ್ತನವರ ಅವರಿಗೆ ಠಾಣೆಯಲ್ಲಿ ನೀಡಿದರು.
ಸಿ. ಪಿ.ಐ ರವಿಕುಮಾರ ಕಪ್ಪತ್ತನವರ, ಎ.ಎಸ್.ಐ ಎಸ್.ಐ ಗದಗ, ವಿಜಯಕುಮಾರ ಸಲಕಿ, ನಿವೃತ್ತ ಎ.ಎಸ್.ಐ ಎಂ.ಎನ್.ತಡಸಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಖಾಜೇಸಾಬ ಹಂಚಿನಾಳ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ರಿಯಾಜಅಹ್ಮದ ನಾಶಿಪುಡಿ, ಬಾಬುಶಾ ಮಕಾಂದಾರ, ಸುಲೇಮಾನ ಮುಳಗುಂದ, ಜಾಕಿರಹುಸೇನ್ ಧಾರವಾಡ, ಸಹ ಶಿಕ್ಷಕರಾದ ಮುಕ್ತಾರಅಹ್ಮದ ಕೊತ್ವಾಲ್, ಬಿ.ಎಸ್ ರಶ್ಮಿ, ಮೀರಾ ಒಡೆಯರ ಉಪಸ್ಥಿತರಿದ್ದರು.