ಸಾಂಸ್ಕøತಿಕ ಬಳುವಳಿ ಉಳಿಸಿ ಬೆಳೆಸೋಣ
ಧಾರವಾಡ,ಜು 5: ಜನಪದ ಸಾಹಿತ್ಯಕ್ಕೆ ನಮ್ಮ ಬದುಕನ್ನುತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಇದೆ. ಇದೊಂದು ಮೋಹಕ ಸಾಹಿತ್ಯವಾಗಿದೆಎಂದು ಕ.ವಿ.ವ ಸಂಘದಕಾರ್ಯಕಾರಿ ಸಮಿತಿ ಸದಸ್ಯ ವೀರಣಒಡ್ಡೀನ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಸರೋಜಿನಿ ಶಿಂತ್ರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಭಜನಾ ಪದಗಳು ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನಪದ ಸಾಹಿತ್ಯ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲವಾಗಿದ್ದು, ಇದು ನಮ್ಮಜನಪದರಜೀವನಾನುಭವದರಸಘಟ್ಟಿ. ನಮ್ಮಜನಪದರುಅನಕ್ಷರಸ್ಥರಾಗಿದ್ದರೂಕಾವ್ಯಕಟ್ಟಿ ಭಾವನಾತ್ಮಕವಾಗಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು.ನಮ್ಮಜನಪದರುಜೀವನದಲ್ಲಿ ಪಟ್ಟ ಪಾಡುಗಳೇ ಹಾಡುಗಳಾಗಿ ರೂಪಗೊಂಡಿವೆ.
ಜನಪದ ಸಾಹಿತ್ಯದಲ್ಲಿ ಪುರುಷರಿಗಿಂತ ಮಹಿಳೆಯರದೇ ಸಿಂಹಪಾಲು. ನಮ್ಮಜನಪದರು ಪುರಾಣ, ಪುಣ್ಯಕಥೆಗಳ ಶ್ರವಣದಿಂದಅಪಾರವಾದ ಲೋಕಾನುಭವ ಪಡೆದು ಕಾವ್ಯಗಳನ್ನು ಪಡಿಯಚ್ಚಿಗಿಳಿಸಿದ್ದಾರೆ.ಹೀಗಾಗಿ ನಮ್ಮ ಹಿರಿಯರು ನಮಗಾಗಿ ಬಿಟ್ಟುಹೋದ ಈ ಸಾಂಸ್ಕøತಿಕ ಬಳುವಳಿಯನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆಎಂದರು.
ಅತಿಥಿಯಾಗಿ ಆಗಮಿಸಿದ್ದ ವೈದ್ಯಾಧಿಕಾರಿಡಾ.ರಾಜಶೇಖರ ಬಶೆಟ್ಟಿ ಮಾತನಾಡಿ, ಡಾ.ಸರೋಜಿನಿ ಶಿಂತ್ರಿಯವರು ಸ್ತ್ರೀ ಸಂವೇದನಾ ಬರಹಗಾರರು ಮತ್ತು ಹೋರಾಟಗಾರÀರಾಗಿದ್ದರು.ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವಲ್ಲಿಅವರ ಪಾತ್ರ ಮಹತ್ವದ್ದಾಗಿತ್ತು.ಅವರುಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರೂಜಾನಪದ ಕಲೆ, ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿದವರು.ಶಿಸ್ತು ಸಮಯ ಪ್ರಜ್ಞೆಗೆಇನ್ನೊಂದು ಹೆಸರೇಡಾ.ಸರೋಜಿನಿ ಶಿಂತ್ರಿ.ಅವರ ಸಾಧನೆ ಅನುಪಮ ಎಂದರು.
ಉಪ್ಪಿನಬೆಟಗೇರಿಯ ಶ್ರೀ ಮಲ್ಲಿಕಾರ್ಜುನ ಭಜನಾತಂಡದವರುಅತ್ಯಂತ ಸೊಗಸಾಗಿ ಜಾನಪದ ಗೀತೆಗಳನ್ನು ಹಾಗೂ ಭಜನಾ ಪದಗಳನ್ನು ಪ್ರಸ್ತುತಪಡಿಸಿದರು.
ಡಾ. ಸರೋಜಿನಿ ಶಿಂತ್ರಿ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿನಗಣ್ಯಮಾನ್ಯರು ಪುಷ್ಪನಮನ ಮಾಡಿಗೌರವ ಸಲ್ಲಿಸಿದರು.ವೇದಿಕೆಯಲ್ಲಿ ಬಸಪ್ಪ ಬಿಜಾಪುರ ಹಾಗೂ ಬಸವರಾಜ ಬೆಳವಗಿ ಇದ್ದರು.ಸಹಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು.ಕೋಶಾಧ್ಯಕ್ಷ ಸತೀಶತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜುಲೈ ತಿಂಗಳ ಕಾರ್ಯಕ್ರಮಗಳ ಸಂಚಾಲಕ ಡಾ.ಧನವಂತ ಹಾಜವಗೋಳ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಎಸ್. ಜಿ. ಪಾಟೀಲ, ಪ್ರಮೀಳಾ ಜಕ್ಕಣ್ಣವರ, ಮಧುಮತಿ ಸಣಕಲ್ಲ. ಮಹಾಂತೇಶ ನರೇಗಲ್ಲ, ಎಂ. ಬಿ. ಹೆಗ್ಗೇರಿ ವಿ. ಬಿ. ಸಂತೋಜಿ ಸೇರಿದಂತೆಅನೇಕರು ಭಾಗವಹಿಸಿದ್ದರು.