ಗಂಥಾಲಯಕ್ಕೆ ಪುಸ್ತಕ ದೇಣಿಗೆ
ಚನ್ನಮ್ಮನ ಕಿತ್ತೂರ,ಜು5: ಜಾತಿ-ಭೇದ ಮರೆತು ಸಮಾಜಕ್ಕಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಡುವ ವ್ಯಕ್ತಿಗಳು ನಿಜವಾದ ಸಮಾಜ ಸೇವಕರೆಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡೆ ಲಕ್ಷ್ಮೀ ವಿಕ್ರಮ್ ಇನಾಮದಾರ ಹೇಳಿದರು.
ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಾಜಿ ಸಚಿವ ದಿ. ಡಿ.ಬಿ.ಇನಾಮದಾರ ಇವರ 76ನೇ ಜನ್ಮದಿನದ ನಿಮಿತ್ಯ ಹಾಗೂ ಡಿ.ಬಿ.ಇನಾಮದಾರ ಫೌಂಡೇಶನ ವತಿಯಿಂದ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರಕ್ಕೆ ಪುಸ್ತಕ ನೀಡಿ ಅವರು ಮಾತನಾಡಿದರು.
ಈ ವೇಳೆ ವಿಕ್ರಮ್ ಇನಾಮದಾರ್, ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತೇಶ ಪಾಶ್ಚಾಪೂರ, ಕಾರ್ಯದರ್ಶಿ ಸೀಮಾ ಹಿರೇಮಠ, ಡಿ.ಬಿ. ಇನಾಮದಾರ ಫೌಂಡೇಶನ, ಅಭಿಮಾನಿ ಬಳಗದವರು, ಗ್ರಂಥಪಾಲಕರು, ಗ್ರಾಪಂ ಸದಸ್ಯರು ಸೇರಿದಂತೆ ಸಾರ್ವಜನಿಕರಿದ್ದರು.