ರಾಜ್ಯಮಟ್ಟದ ಕಾರ್ಯಾಗಾರ
ಬಾಗಲಕೊಟೆ,ಜು5: ಸಂಶೋಧನೆ ಗಂಭೀರವಾದ ಮಹತ್ವದ ಸಂಗತಿಯಾಗಿದ್ದು ಅದು ಪ್ರಗತಿಯತ್ತ ಸಾಗುವುದಾಗಿದೆ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಶೋಧನೆಗಳ ಅಗತ್ಯತೆ ಇದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗಣೀತ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲಕುಮಾರ ಹೊಸಮನಿ ಹೇಳಿದರು.
ಅವರು ಬಿ.ವಿ.ವಿ.ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ “ಸಂಶೋಧನಾ ವಿಧಾನ” ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಸಂಪನ್ನೂಲವ್ಯಕ್ತಿಗಾಳಾಗಿ ಆಗಮಿಸಿ ಮಾತನಾಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಬಸವೇಶ್ವರ ಇಂಜಿನಿಯರಿಂಗ್ ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ. ಶ್ರೀಕಾಂತ ಕಾರ್ಕೂನ ಅವರು ಶೈಕ್ಷಣಿಕ ಸಮಗ್ರತೆಗಾಗಿ ಕೌಶಲ್ಯಗಳು ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ್ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೇಳಸಿ, ವಿದ್ಯಾರ್ಥಿಗಳನ್ನು ಜ್ಞಾನಸಮೃದ್ಧಿಯನ್ನಾಗಿ ಮಾಡುವ ಉದ್ದೇಶದಿಂದ ಇಂತಹ ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇಂದಿನ ಕಾರ್ಯಾಗಾರ ಸದುಪಯೋಗವನ್ನು ವಿದ್ಯಾರ್ಥಿಗಳು ತಗೆದುಕೊಂಡು ತಮ್ಮ ಸಂಶೋಧನಾ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದರು.
ಕಾರ್ಯಕ್ರಮ ಸಂಯೋಜಕಿ ಡಾ. ಎಸ್.ಆರ. ಕಲಾದಗಿ ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್.ಲಮಾಣಿ ಪರಿಚಯಿಸಿದರು, ವಿದ್ಯಾರ್ಥಿನಿ ಸಹನಾ ಕುಲಕರ್ಣಿ ಪ್ರಾರ್ಥಿಸಿದರು, ಡಾ.ಮಾದವರಾವ್ ಕುಲಕರ್ಣಿ ವಂದಿಸಿದರು.