ಲೋಕಸಭಾ ಸದಸ್ಯರ ಕಚೇರಿ ಉದ್ಘಾಟನೆ
ಕೋಲಾರ,ಜು,೫- ನಗರದ ನ್ಯಾಯಾಲಯದ ಅವರಣದಲ್ಲಿ ಲೋಕಸಭಾ ಸದಸ್ಯರ ಕಚೇರಿಯನ್ನು ಎಂ. ಮಲ್ಲೇಶ್ ಬಾಬು ಅವರು ಶಾಸ್ತ್ರೋಸ್ತ್ರವಾಗಿ ತಮ್ಮ ಕಚೇರಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಉದ್ಘಾಟಿಸಿದರು,
ಕಾರ್ಯಕ್ರಮವು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿಯವರ ಸಾನಿಧ್ಯದಲ್ಲಿ ಮಲ್ಲೇಶ್ ಬಾಬು ಅವರು ತಮ್ಮ ತಾಯಿಯವರ ಆಶೀರ್ವಾದ ಪಡೆದು ಪೂಜಾ ಕಾರ್ಯಗಳನ್ನು ನೆರವೇರಿಸಿದರು,
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಲೂರಿನ ಮಾಜಿ ಶಾಸಕ ಮಂಜುನಾಥ್, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್, ಜಿ.ಪಂ. ಮಾಜಿ ಸದಸ್ಯ ಬಂಗಾರಪೇಟೆ ಮಹೇಶ್,ಕೋಚಿಮುಲ್ ನಿರ್ದೇಶಕರಾದ ಡಿ.ವಿ.ಹರೀಶ್, ಕಾಡೇನಹಳ್ಳಿ ನಾಗರಾಜ್,ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ವಡಗೂರು ರಾಮು, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಸೊಣ್ಣೆಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಟಮಕ ವೆಂಕಟೇಶ್, ಕೆ.ಜಿ.ಎಫ್. ಮಾಜಿ ನಗರಸಭಾ ಅಧ್ಯಕ್ಷ ದಯಾನಂದ್, ಕಪಾಲಿ, ಕೋಲಾರ ನಗರಸಭಾ ಸದಸ್ಯ ರಾಕೇಶ್, ಮಂಜುನಾಥ್, ಅರಹಳ್ಳಿ ಅಶ್ವಥ್ ಗೌಡ, ಮಾಲೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್, ಜೆ.ಡಿ.ಎಸ್. ಮುಖಂಡರಾದ ಬಣಕನಹಳ್ಳಿ ನಟರಾಜ್, ಬಾಬು ಮೌನಿ, ಬಿಜೆಪಿ ಮುಖಂಡರಾದ ಡಾ. ವೇಣುಗೋಪಾಲ್, ಮಾಗೇರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರ, ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ಮಾಲೂರು ಹನುಮಪ್ಪ ಮುಂತಾದವರು ಭಾಗವಹಿಸಿ ಶುಭಹಾರೈಸಿದರು,
ಈ ಹಿಂದಿನ ಮಾಜಿ ಎಸ್.ಮುನಿಸ್ವಾಮಿ ಅವರು ಕಚೇರಿಯನ್ನು ಉಪಯೋಗಿಸುತ್ತಿದ್ದರು. ಕಚೇರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರು. ಇಂಟಿರಿಯಲ್ ಡೆಕೋರೇಟ್ ಎಲ್ಲವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಾಡಿದ್ದರು. ಕಾರ್ಯಕರ್ತರ ಸಭಾಂಗಣ, ಕಚೇರಿಯ ಸಿಬ್ಬಂದಿಗಳಿಗೆ, ಆಪ್ತಸಹಾಯಕರಿಗೆ ವಿಶೇಷ ಕೊಠಡಿಗಳನ್ನು ಹಾಗೂ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಲಾಗಿದೆ.
ಇದರ ಜೂತೆಗೆ ಕಚೇರಿಗೆ ಪೂರಕವಾದ ಲ್ಯಾಪ್ ಟಾಪ್, ಪ್ರಿಟಿಂಗ್ ಮಿಷನ್, ಟಿ.ವಿ.ಗಳು ಒಳಗೊಂಡಂತೆ ಎಲ್ಲಾ ಸೌಲಭ್ಯಗಳು ಕಚೇರಿಯಲ್ಲಿ ಹೊಂದಿವೆ.