ಕಾಂಗ್ರೆಸ್‌ಗೆ ನಗರಸಭೆ ಸದಸ್ಯೆ ಶಾಂತಿ ಸೇರ್ಪಡೆ
ಕೆಜಿಎಫ್.ಜು.೫-ನಗರಸಭೆಯ ೧೩ನೇ ವಾರ್ಡ್ ಪಕ್ಷೇತರ ನಗರಸಭೆ ಸದಸ್ಯೆ ಶಾಂತಿ ಹಾಗೂ ಅವರ ಪುತ್ರ ಮಣಿಕಂಠನ್‌ರವರನ್ನು ಶಾಸಕಿ ರೂಪಕಲಾಶಶಿಧರ್ ಕಾಂಗ್ರೆಸ್ ಶಾಲು ಹಾಕುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು.
ಚಾಂಪೀಯಿನ್‌ರೀಪ್ ಮ್ಯಾರಿಡ್ ಬಡಾವಣೆಯಲ್ಲಿರುವ ನಗರಸಭೆ ಸದಸ್ಯೆ ಶಾಂತಿ ರವರ ಮನೆಗೆ ತೆರಳಿದ ಶಾಸಕಿ ರೂಪಕಲಾಶಶಿಧರ್‌ರನ್ನು ಕುಟುಂಬ ಸದಸ್ಯರು ಹಾಗೂ ವಾರ್ಡ್‌ನ ನಾಗರೀಕರು ಆತ್ಮೀಯವಾಗಿ ಸ್ವಾಗತಿಸಿದರು.
ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ಶಾಂತಿ ಪಕ್ಷೇತರ ಸದಸ್ಯರಾಗಿ ಇದ್ದು ಹಿಂದೆ ಬೇರೆ ಪಕ್ಷಕ್ಕೆ ಬೆಂಬಲಿಸಿದ್ದರು ಆದರೆ ಇಧೀಗ ಸರ್ಕಾರ ಕಾಂಗ್ರೆಸ್ ಹಾಗೂ ನಗರಸಭೆ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಕ್ಷವಾಗಿರುವುದರಿಂದ ವಾರ್ಡ್‌ನ ಅಭಿವೃದ್ಧಿಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಗೊಂಡಿದ್ದಾರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ ಮತ್ತು ವಾರ್ಡ್ ಅಭಿವೃದ್ಧಿಗಾಗಿ ಸಹಕರಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಗೊಂಡು ಮಾತನಾಡಿದ ನಗರಸಭೆ ಸದಸ್ಯೆ ಶಾಂತಿ ಪುತ್ರ ಮಣಿಕಂಠನ್ ನಮ್ಮ ತಾಯಿ ಪಕ್ಷೇತರ ನಗರಸಭೆ ಸದಸ್ಯೆಯಾಗಿದ್ದು ಹಿಂದೆ ಮಾಜಿ ಶಾಸಕ ಸಂಪಂಗಿಯವರ ಬಿಜೆಪಿ ಪಕ್ಷ ಬೆಂಬಲಿಸಿದ್ದು ನಿಜ ನಮ್ಮ ವಾರ್ಡ್‌ನ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದೇ ಆದರೆ ಇಧೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವಿದ್ದು ನಗರಸಭೆ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಆಗಿರುವುದರಿಂದ ನನಗೆ ವಾರ್ಡ್ ಅಭಿವೃದ್ಧಿಯಾಗಬೇಕು ಎಂಬ ಒಂದೇ ದೃಷ್ಠಿಕೋನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಯಾಗಿದ್ದೇನೆ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಯಲ್ಲಿ ನನ್ನ ವೈಯುಕ್ತಿಕ ಲಾಭವಿಲ್ಲ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದುಲೈಮುತ್ತು, ನಗರಸಭೆ ಸದಸ್ಯರಾದ ಜರ್ಮನ್, ವೇಣು.,ಶಾಲಿನಿನಂದಕುಮಾರ,ಸುರೇಖಸುರೇಶ್ ,ಮಾಜಿ ನಗರಸಭೆ ಸದಸ್ಯ ಕುಮಾರ್ ಹಾಗೂ ವಾರ್ಡ್ ನ ನಾಗರೀಕರು ಹಾಜರಿದ್ದರು.