ಸಮಾಜಮುಖಿ ಕಾರ್ಯಗಳಿಂದ ಬದುಕು ಸಾರ್ಥಕ
ಹೊಸಕೋಟೆ.ಜು.೫- ಮಾನವನ ಬದುಕಿನಲ್ಲಿ ದಾನಧರ್ಮ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ಸಾರ್ಥಕ ಬದುಕಿಗೆ ಅನುವಾಗುತ್ತದೆ ಎಂದು ಮಾಜಿ ಸಂದರಾದ ಬಿಎನ್ ಬಚ್ಚೇಗೌಡರವರು ತಿಳಿಸಿದರು.
ಹೊಸಕೋಟೆ ನಗರದಲ್ಲಿ ಮಾಜಿ ಪುರಸಭಾ ಅಧ್ಯಕ್ಷರು ಸಮಾಜ ಸೇವಕರು ಆದ ದಿವಗಂತ ತ್ಯಾಗರಾಜುರವರ ಜ್ನಾಪಕರಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಅನಾಥಾಶ್ರಮಗಳಿಗೆ ಮತ್ತು ಬಡಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂದೆತಾಯಿಗಳು ಬದುಕಿದ್ದಾಗಲೆ ಅವರ ಪೋಷಣೆ ಮಾಡುವುದು ಕಷ್ಟಸಾಧ್ಯ ಅಂತಹುದರಲ್ಲಿ ತ್ಯಾಗರಾಜುರವರು ಕಳೆದ ೪೦ ವರ್ಷಗಳಿಂದ ಸತತವಾಗಿ ದಾನಧರ್ಮ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು ಅವರ ಅಗಲಿಕೆಯ ನಂತರವೂ ಅವರ ಕುಟುಂಬದವರು ಅವರ ಹಾದಿಯಲ್ಲಿ ನಡೆದು ಅವರು ಮಾಡಿರು ಸಾರ್ಥಕ ಸೇವೆಗಳನ್ನು ಮುಂದುವರೆಸಿದ್ದು ೧೫೦೦ ಮಂದಿಗೆ ದಿನಸಿ ಕಿಟ್ ಮತ್ತು ಅನಾಥಾಶ್ರಮಗಳಿಗೆ ವಸ್ತ್ರದಾನ ಮತ್ತು ದಿನಸಿ ಪದಾರ್ಥಗಳ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.
ನಂತರ ಸಮಾಜಸೇವಕ ಡಾ. ಹೆಚ್. ಎಂ. ಸುಬ್ಬರಾಜುರವರು ಹಿರಿಯರಾದ ದಿವಂಗತ ತ್ಯಾಗರಾಜುರವರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಆ ನಿಟ್ಟಿನಲ್ಲಿ ದುಂದು ವೆಚ್ಚಗಳಿಗೆ ಕಡಿವಾಣಹಾಕಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸತ್ತ ಮೇಲು ಕೂಡ ನಮ್ಮ ಸೇವೆಗಳ ಮೂಲಕ ಜೀವಂತವಾಗಿರುತ್ತವೆ ಎಂದರು.
ಈಸಂಧರ್ಭದಲ್ಲಿ ಸಮಾಜ ಸೇವಕರಾದ ಬಿ ವಿಬೈರೇಗೌಡ ಸದಾನಂದ, ನಾಗರಾಜ್ ಅಣ್ಣಯ್ಯ, ಬಚ್ಚಣ್ಣ ವಾಸುದೇವಯ್ಯ ಹೋರಾ ವೆಂಕಟೇಶ್ ಸೇರಿದಂತೆ ಇತರರು ಇದ್ದರು.