ಭ್ರಷ್ಟಚಾರ ದಾಖಲೆಗಳು ನೀಡಿದರೂ ಅಧಿಕಾರಿಗಳಿಂದ ಕ್ರಮವಿಲ್ಲ
ಕೋಲಾರ,ಜು,೫- ಕೋಲಾರ ರೇಷ್ಮೆ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಬಳಗೇರೆ ಶಂಕರೇಗೌಡರ ಆಡಳಿತದ ಕಾರ್ಯ ಚಟುವಟಿಕೆಗಳ ಕುರಿತು ಸಲ್ಲಿಸಲಾದ ಹಲವಾರು ಅಕ್ರಮ ಹಾಗೂ ಭ್ರಷ್ಟಾಚಾರದ ದೂರುಗಳ ಕುರಿತು ಕೇಂದ್ರ ಕಛೇರಿಯ ಉಪನಿರ್ದೇಶಕರು ಮತ್ತು ಜಿಲ್ಲಾ ರೇಷ್ಮೇ ಉಪ ನಿರ್ದೇಶಕರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳ ಬೇಕೆಂದು ಕಂಪನಿಯ ನಿರ್ದೇಶಕರಾದ ನಡುಪಳ್ಳಿ ಎನ್.ಕೃಷ್ಣಮೂರ್ತಿ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಎಫ್.ಪಿ.ಓ ದಲ್ಲಿ ೧೦೧೩ ಮಂದಿ ಷೇರು ಸದಸ್ಯರನ್ನು ಹೊಂದಿದೆ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಹಣವನ್ನು ದುರ್‍ಬಳಿಸಿ ಕೊಂಡಿದೆ. ಕಳೆದ ಮೂರು ವರ್ಷಗಳಿಂದ ರೇಷ್ಮೆ ಮಾರುಕಟ್ಟೆ ಅವರಣದಲ್ಲಿ ೪,೬೯ ಲಕ್ಷ ರೂ ವೆಚ್ಚದಲ್ಲಿ ಕಂಪನಿ ಹಣದಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಸರ್ವಸದಸ್ಯರ ಸಭೆಯನ್ನು ನಡೆಸಲಾಗುತ್ತಿತ್ತು. ಸಭೆಯಲ್ಲಿ ಅಧ್ಯಕ್ಷರು ಮಾತ್ರ ಗೌರವ ಧನ ಪಡೆಯುತ್ತಿದ್ದರು. ಸಾಮಾನ್ಯ ಸಭೆಗಳನ್ನು ನಡೆಸುತ್ತಿಲ್ಲ, ಸಂಸ್ಥೆಯಲ್ಲಿ ರೇಷ್ಮೆ ಉದ್ಯಮಕ್ಕೆ ಸಂಬಂಧ ಪಟ್ಟ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದರು. ಕೆ.ಡಿ.ಪಿ. ಮಾಜಿ ಸದಸ್ಯ ಡಾ.ವಿ.ವೆಂಕಟರಾಮಯ್ಯ ಮಾತನಾಡಿ ಈ ಸಂಬಂಧವಾಗಿ ಲೋಕಾಯುಕ್ತರಿಂದ ಕಳೆದ ೨೦೧೬ ರಿಂದ ೨೪ರವರೆಗೆ ಕೆ.ಸಿ.ಎಸ್.ಆರ್. ನಿಯಮದ ಪ್ರಕಾರ ಪರಿಶೀಲನೆ ನಡೆಸ ಬೇಕು, ಭ್ರಷ್ಟ ಅಧಿಕಾರಿಗಳಿಗೆ ಯಾವೂದೇ ಕಾರಣಕ್ಕೂ ಮುಂಬಡ್ತಿ ನೀಡ ಬಾರದು ಎಂದು ಆಗ್ರಹ ಪಡೆಸಿದರು.
ಜಿಲ್ಲೆಯಲ್ಲಿ ರೇಷ್ಮೆ ಜಂಟ ನಿರ್ದೆಶಕರು, ರೇಷ್ಮ ಉಪನಿರ್ದೇಶಕರು, ಎಂ.ಕೆ.ಪ್ರಭಾಕರ್, ಅಂಜನೇಯಗೌಡ, ಎಂ.ನಾಗರಾಜು, ಬಿ.ಎಲ್. ಕೃಷ್ಣಪ್ಪ, ಕೆ.ಎಂ.ಅಶ್ವಥ್ ನಾರಾಯಣ. ಬೈರೇಗೌಡ, ಬಿ.ಸಿ.ವೆಂಕಟೇಶ್, ಎಂ.ಮಂಜುನಾಥ್, ಕಲ್ಯಾಣಸ್ವಾಮಿ, ಜಯಶಂಕರ್, ಸಿ.ಜಿ.ಪಾಟೀಲ್, ಶಿವ ಪ್ರಕಾಶ್, ಟಿ.ಎಸ್.ನಾರಾಯಣಸ್ವಾಮಿ, ಎಂ.ಆರ್. ಪ್ರಸನ್ನ, ಪೂಜಪ್ಪ ಹಿರೇಕುರುಬರ,ವಾಸುದೇವ್ ಹಾಗೂ ಬ್ಯಾಟರಾಯಪ್ಪ ಇವರುಗಳ ಮಾಡಿರುವ ಭ್ರಷ್ಟಚಾರದಿಂದ ಸರ್ಕಾರದ ರೇಷ್ಮೇ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಷೇರುದಾರ ಸುರೇಶ್ ಮಾತನಾಡಿ ಕಳೆದ ೪-೫ ವರ್ಷಗಳಿಂದ ವ್ಯಾಪಕವಾದ ಭ್ರಷ್ಟಚಾರಗಳ ವಿರುದ್ದ ತನಿಖೆ ನಡೆಸಲು ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸರ್ಕಾರದ ಸೌಲಭ್ಯಗಳ ಬಗ್ಗೆ ಯಾವೂದೇ ಅರಿವು ನೀಡುತ್ತಿಲ್ಲ. ಚಾಕಿ ಕೇಂದ್ರಗಳಲ್ಲಿ ೩೦೦ ರೂಗಳಿಗೆ ಸಿಗುತ್ತಿದ್ದ ಮೊಟ್ಟೆಗಳಿ ಇಂದು ದುಬಾರಿಯಾಗಿದ್ದು ಈಗಾ ರೂ೭.೫೦೦ ರೂಗಳವರೆಗೆ ಏರಿಕೆಯಾಗಿದೆ ಎಂದು ಅರೋಫಿಸಿದರು, ಕೂಡಲೇ ಅಧ್ಯಕ್ಷ ಶಂಕರೇಗೌಡರನ್ನು ಬದಲಾವಣೆ ಮಾಡಬೇಕು ಹೊಸ ಅಧಿಕಾರಿಗಳ ನೇಮಕ ಮಾಡಬೇಕು. ಆವರೆಗೆ ಸೂಪರ್‌ಸೀಡ್ ಮಾಡ ಬೇಕೆಂದು ಒತ್ತಾಯಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಹೊನ್ನೇನಹಳ್ಳಿ ನಾರಾಯಣಸ್ವಾಮಿ,ಗರುಡನಪಾಳ್ಯದ ಪ್ರಸಾದ್, ನವೀನ್ ಉಪಸ್ಥಿತರಿದ್ದರು.