ಮಾದಕ ವ್ಯಸನ ಮತ್ತು ಮಧ್ಯಪಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು
ಸಂಜೆವಾಣಿ ವಾರ್ತೆ
ಭಾರತೀನಗರ:ಜು.05- ಭಾರತೀನಗರದ ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾದಕ ವ್ಯಸನ ಮತ್ತು ಮಧ್ಯಪಾನದ ಬಗ್ಗೆ ಭಾರತೀನಗರದ ಪೆÇಲೀಸ್‍ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಆನಂದ್ ಅವರು ಮಾತನಾಡಿ, ಮಧ್ಯಪಾನ ಮತ್ತು ದುಶ್ಚಟಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಜೊತೆಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ ಎಂದರು.
ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬಾರದು. ದುಶ್ಚಟಗಳಿಂದ ಅನೇಕ ಅಪರಾಧಗಳು ಹೆಚ್ಚಾಗುತ್ತಿವೆ. ಹಾಗಾಗಿ ಮಾದಕವ್ಯಸನಿಗಳಾಗಬಾರದೆಂದು ತಿಳಿಹೇಳಿದರು.
ಮಾದಕ ವಸ್ತುವನ್ನು ಹಣದ ಆಸೆಗಾಗಿ ನೀಡುತ್ತಾರೆ. ಅದನ್ನು ತಡೆಯಲು ಕಾನೂನು ಕ್ರಮಕೈಗೊಂಡಿದ್ದೇವೆ. ಗಾಂಜಾ, ಡ್ರಗ್ಸ್ಗಳನ್ನು ಮಾರಾಟ ಮಾಡುವವರ ಹೆಸರನ್ನು ಪೆÇಲೀಸರಿಗೆ ತಿಳಿಸಿದರೆ ಅಂತಹವರ ಹೆರನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಚಾರಿ ಇನ್ಸ್ಪೆಕ್ಟರ್ ಸ್ವಾತಿ, ಇನ್ಸ್ಪೆಕ್ಟರ್ ಆನಂದ್, ಸಂಚಾರಿ ನಿಯಂತ್ರಣ ಪಿಎಸ್‍ಐ ಬಸವರಾಜು, ವಾಣಿ ಅವರನ್ನು ಭಾರತೀ ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಿದರು.
ವೇದಿಕೆಯಲ್ಲಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಿ.ಕೆ.ಕೃಷ್ಣ, ಉಪನ್ಯಾಸಕರು ಉಪಸ್ಥಿತರಿದ್ದರು