ಮೂವರು ಅಧಿಕಾರಿಗಳಿಗೆ ಸನ್ಮಾನ-ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಕೊಳ್ಳೆಗಾಲ ಜು 5 :- ಕೊಳ್ಳೇಗಾಲ ಭೂ ದಾಖಲೆಗಳ ಸಹಾಯಕ ಕಚೇರಿಯಲ್ಲಿ ತಪಾಸಕರ ಹುದ್ದೆಯಿಂದ ಮುಂಬಡ್ತಿ ಪಡೆದು ಅಧೀಕ್ಷಕರ (ಕಾರ್ಯನಿರ್ವಾಹಕ) ಹುದ್ದೆಗೆ ಮುಂಬಡ್ತಿ ಪಡೆದು ವರ್ಗಾವಣೆಯಾಗಿರುವ ಮೂವರು ಅಧಿಕಾರಿಗಳನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಭೂ ದಾಖಲೆಗಳ ಸಹಾಯಕ ಕಚೇರಿಯಲ್ಲಿ ಮುಂಬಡ್ತಿ ಪಡೆದು ವರ್ಗಾವಣೆಯಾಗಿರುವ ಜೆ. ಕುಮಾರಸ್ವಾಮಿ, ನಂಜುಂಡಸ್ವಾಮಿ, ಲೀಲಾವತಿ ಅವರನ್ನು ಇಲ್ಲಿನ ಅಧಿಕಾರಿಗಳು ಸಿಬ್ಬಂದಿಗಳು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಮಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಜೆ.ಕುಮಾರ್ ಸ್ವಾಮಿ ಅವರು ಮಾತನಾಡಿ ಭೂ ದಾಖಲೆಗಳ ಸಹಾಯಕ ಕಚೇರಿಯಲ್ಲಿ ಇಲ್ಲಿ ಇರುವ ಇಷ್ಟು ವರ್ಷಗಳು ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ನನಗೆ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ.
ಸರ್ಕಾರ ನನ್ನ ಕರ್ತವ್ಯವನ್ನು ಪರಿಗಣಿಸಿ ಮುಂಬಡ್ತಿ ನೀಡಿ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ. ಮುಂದೆಯೂ ಇದೆ ರೀತಿ ನೇಮಕ ಮಾಡಿರುವ ಕಛೇರಿಯಲ್ಲಿ ಎಲ್ಲರ ಸಹಕಾರದಿಂದ ಕಛೇರಿ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಹನೂರು ಭೂ ದಾಖಲೆಗಳ ಸಹಾಯಕ ಕಛೇರಿ ಕೊಳ್ಳೇಗಾಲದಲ್ಲಿ ಸೂಪರ್ ವೇಜರ್ (ತಪಾಸಕರು) ಜೆ.ಕುಮಾರ್ ಸ್ವಾಮಿ (ಅಂ.ವಿ ) ಅವರು ಮುಂಬಡ್ತಿ ಪಡೆದು ಅಧೀಕ್ಷಕರಾಗಿ ಗುಂಡ್ಲುಪೇಟೆ ಭೂ ದಾಖಲೆಗಳ ಸಹಾಯಕ ಕಚೇರಿಗೆ ವರ್ಗಾವಣೆಯಾಗಿದ್ದಾರೆ.
ಕೊಳ್ಳೇಗಾಲ ಭೂ ದಾಖಲೆಗಳ ಸಹಾಯಕ ಕಚೇರಿ ಸೂಪರ್ ವೇಜರ್ ನಂಜುಂಡಸ್ವಾಮಿ ತಪಾಸಕರ ಹುದ್ದೆಯಿಂದ ಮುಂಬಡ್ತಿ ಪಡೆದು ಅಧೀಕ್ಷಕರಾಗಿ ಭೂ ದಾಖಲೆಗಳ ಸಹಾಯಕ ಕಛೇರಿ ಮುಳಬಾಗಿಲುಗೆ ವರ್ಗವಣೆಯಾಗಿದ್ದಾರೆ. ಮತ್ತು ಸೂಪರ್ ವೇಜರ್ ಲೀಲಾವತಿ ಅವರು ಮುಂಬಡ್ತಿ ಪಡೆದು ಅಧೀಕ್ಷಕರಾಗಿ ಭೂ ದಾಖಲೆಗಳ ಸಹಾಯಕ ಕಛೇರಿ ಬೆಳತ್ತಂಗಡಿಗೆ ವರ್ಗವಣೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಟರಾಜ್ ಎ.ಡಿ.ಎಲ್.ಆರ್, ಅಧೀಕ್ಷಕರು ಚೇತನ್, ಸೂಪರ್ ವೇಜರ್ ಮತ್ತು ಭೂಮಾಪಕರು ಶ್ರೀನಿವಾಸ್ ಮೂರ್ತಿ ಹಾಗೂ ಭೂ ದಾಖಲೆಗಳ ಸಹಾಯಕ ಕಚೇರಿಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.