ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಧ್ಯೇಯ: ಅಧ್ಯಕ್ಷ ಗೌರಿಶಂಕರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.05- ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ನಗರ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದ ಪಕ್ಕದ ಸಿಜಿ ಕಾಂಪ್ಲೇಕ್ಸ್‍ನರುವ ವಕೀಲರಾದ ನಾಗಶ್ರೀ ಪ್ರತಾಪ್ ಅವರ ಕಚೇರಿಯಲ್ಲಿ ಸ್ಥಾಪಿಸಿರುವ ಇ-ಸ್ಟಾಪಿಂಗ್ ಘಟಕವನ್ನು ಸಂಘದ ಅಧ್ಯಕ್ಷ ಎಂ. ಗೌರಿಶಂಕರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಹಕಾರ ಸಂಘದಿಂದ ಇ-ಸ್ಟಾಪಿಂಗ್ ಶಾಖೆಯನ್ನು ಈಗಾಗಲೇ ಸಂತೇಮರಹಳ್ಳಿಯಲ್ಲಿ ಆರಂಭಿಸಿದ್ದು, ಜಿಲ್ಲಾ ಕೇಂದ್ರದಲ್ಲಿ ಮಾಜಿ ಶಾಸಕ ದಿ. ಸಿ. ಗುರುಸ್ವಾಮಿ ಅವರ ಕಾಂಪ್ಲೆಕ್ಸ್‍ನಲ್ಲಿ ಇಂದು ಆರಂಭಿಸಲಾಗಿದೆ. ತಾಲೂಕು ಕಚೇರಿ ಹಾಗೂ ಉಪ ನೊಂದಾಣಿ ಇಲಾಖೆಯ ಹತ್ತಿರದಲ್ಲಿ ಶಾಖೆಯನ್ನು ಆರಂಭಿಸಿದ್ದು, ಸಾರ್ವಜನಿಕರು ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಡಾ. ಪರಮೇಶ್ವರಪ್ಪ, ಕೆ.ಎಸ್. ಮಹದೇವಸ್ವಾಮಿ, ಎಸ್. ಗುರುಸ್ವಾಮಿ, ಎಂ. ಲಿಂಗರಾಜಮೂರ್ತಿ, ಎಚ್.ಎಂ. ಗುರುಸ್ವಾಮಿ, ಬಿ. ನಾಗೇಂದ್ರ, ವಿ. ನಂಜುಂಡಸ್ವಾಮಿ, ಎನ್. ದೊರೆಸ್ವಾಮಿ, ಸಿ. ರಾಜಶೇಖರಮೂರ್ತಿ, ಪ್ರಮೀಳಾ ಆರ್. ಉದಗಟ್ಟಿ, ಎಸ್. ನಾಗಮಣಿ, ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ವಕೀಲೆ ನಾಗಶ್ರೀಪ್ರತಾಪ್, ಮಾಜಿ ಅಧ್ಯಕ್ಷ ಯೋಗಪ್ರಕಾಶ್, ಮಾಜಿ ನಿರ್ದೇಶಕ ಪೊಲೀಸ್ ಕುಮಾರ್, ಸುಂದ್ರಪ್ಪ, ಕಾರ್ಯದರ್ಶಿ ನಂಜುಂಡಸ್ವಾಮಿ, ಸಿಬ್ಬಂದಿಗಳಾದ ಮಹೇಂದ್ರ, ಆಕಾಶ್ ಇತರರು ಇದ್ದರು.