ಭಾರತೀಯ ರೆಡ್ ಕ್ರಾಸ್ ನಿಂದ‌ ರಕ್ತದಾನ‌ ಶಿಬಿರ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.4; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, , ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ (ರಿ )  ಸಹಯೋಗದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಪ್ರಯುಕ್ತ ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ  ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ದಾವಣಗೆರೆ ಚಾರ್ಟೆರ್ಡ್ ಅಕೌಂಟೆಂಟ್ಸ್ ಅಸೋಸಿಷನ್ ನ ಅಧ್ಯಕ್ಷರಾದ ಸಿಎ. ಕಿರಣ್. ಎಲ್. ಪಾಟೀಲ್, ಗೌರವಾಧ್ಯಕ್ಷರಾದ ಸಿಎ. ಅಥಣಿ. ಎಸ್. ವೀರಣ್ಣ, ಕಾರ್ಯದರ್ಶಿಯವರಾದ ಸಿಎ. ಉಮೇಶ್ ಶೆಟ್ಟಿ, ಖಜಾಂಜಿಗಳಾದ ಸಿಎ. ಲಿಂಗರಾಜ್, ಮಾಜಿ ಅಧ್ಯಕ್ಷರುಗಳಾದ ಸಿಎ. ಬಸವರಾಜ್ ಒಡೆಯರ್, ಸಿಎ. ಕಿರಣ್ ಕುಮಾರ್, ಸಿಎ. ಗಿರೀಶ್ ನಾಡಿಗ್, ಸಿಎ. ವಿಜಯ್ ಕುಮಾರ್, ಸಿಎ. ಮಹೇಶ್ ಶೆಂಡಿಗೆ, ಸಂಘದ ಸದಸ್ಯರುಗಳು, ಸಿಎ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಈ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆಯ ನಿರ್ದೇಶಕರಾದ  ಸಿಎ ಉಮೇಶ್ ಶೆಟ್ಟಿ, ಶಿವಾನಂದ ಡಿ ಎನ್, ಪೊನ್ನಲಾಲ್, ಕೊಟ್ರೇಶ್, ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್,  ರಕ್ತನಿಧಿ ಕೇಂದ್ರದ ಜಿಲ್ಲಾ ಆಪ್ತಸಮಾಲೋಚಕರು ಮತ್ತು ಸಂಯೋಜಕರಾದ  ಶಿವಕುಮಾರ ಎನ್ ಜಿ, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಗಿರೀಶ್ ಕೆ, ಅಟೆಂಡರ್ ರಾದ ಪದ್ಮಬಾಯಿ, ಛಾಯಾ ಇತರರು ಹಾಜರಿದ್ದರು.