ಹೊಸ ರೇಷನ್ ಕಾರ್ಡ್ ಗಾಗಿ ಮುಗಿಬಿದ್ದ ಜನರು
ಸಂಜೆವಾಣಿ ವಾರ್ತೆ
ಜಗಳೂರು.ಜು.೪: ಪಟ್ಟಣದ ತಾಲೂಕು ಪಂಚಾಯಿತಿ ಸಮೀಪದ ಆನ್ ಲೈನ್ ಕೇಂದ್ರದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ನಾಗರಿಕರು ಮುಗಿಬಿದ್ದಿದ್ದಾರೆ.ಸುಮಾರು 2 ವರ್ಷಗಳಿಂದ ಹೊಸ ರೇಷನ್ ಕಾರ್ಡಿಗೆ ಅವಕಾಶವಿರಲಿಲ್ಲ ಈಗ ಎರಡು ದಿನಗಳು ಅವಕಾಶ ನೀಡಿದ್ದು ಅದು ಕೇವಲ ಎರಡು ಗಂಟೆ ಅದರಲ್ಲಿ ಸರ್ವರ್ ಸಮಸ್ಯೆಯಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಸಿಎಸ್ ಇ ಕೇಂದ್ರ ಮತ್ತು ಗ್ರಾಮ ಒನ್ , ಕರ್ನಾಟಕ ಒನ್ ಕೇಂದ್ರಗಳ ಮುಂದೆ ಸಾರತಿ ಸಾಲಿನಲ್ಲಿ ನಿಂತಿರುವುದು ಸಾಮಾನ್ಯವಾಗಿ ಕಂಡು ಬಂದ ದೃಶ್ಯ, ಗ್ರಾಮೀಣ ಪ್ರದೇಶಗಳಿಂದ ಚಿಕ್ಕ ಮಕ್ಕಳನ್ನು ಕಂಕಳಲ್ಲಿ ಕೂರಿಸಿಕೊಂಡು ಗೃಹಿಣೆಯರು ಸಾರತಿ ಸಾಲಿನಲ್ಲಿ ನಿಂತು ಅರ್ಜಿಹಾಕಲು ಅವಕಾಶ ದೊರೆಯದ ಕಾರಣ ಬಂದ ದಾರಿಗೆ ಸುಂಕ ವಿಲ್ಲ ಎಂಬAತೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರು.