ಜಗಳೂರಿನಲ್ಲಿ ಜುಲೈ 13ರಂದು ಲೋಕ ಅದಾಲತ್ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಜಗಳೂರು.ಜು.೪ :- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲ್ಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜುಲೈ 13 ರಂದು ನಡೆಯಲಿರುವ ಲೋಕ್ ಅದಾಲತ್ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಮಹಾವೀರ್ ಮಾತನಾಡಿ ದೇಶದಾದ್ಯಂತ 3 ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ ಕಡಿಮೆ ಖರ್ಚಿನಲ್ಲಿ ಅತಿ ಬೇಗ ರಾಜಿ ಮಾಡಿಕೊಳ್ಳಬಹುದು ದ್ವಂದ್ವ ನಿಲುವು ಹಗೆತನ ಮರೆತು ಸಹೋದರತ್ವ ಬಾಂದವ್ಯ ಬೆಳೆಸಿಕೊಂಡು ಅನ್ಯೋನ್ಯತೆಯಿಂದ ಬದುಕಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.ಲೋಕ್ ಅದಾಲತ್ ತಂಡದ ನಾಯಕ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಸಲಗರವರು ಮಾತನಾಡಿ ನ್ಯಾಯಾಲಯದಲ್ಲಿ ತಾಲ್ಲೂಕಿನ ಜನರು ಬಹಳಷ್ಟು ಮುಗ್ದರಿದ್ದಾರೆ ಗ್ರಾಮೀಣ ಭಾಗದಿಂದ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಲೋಕ್ ಅದಾಲತ್ ನಲ್ಲಿ ಎಲ್ಲ ವೈಷಮ್ಯವನ್ನು ಮರೆತು ರಾಜಿ ಮಾಡಿಕೊಂಡು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ನಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಸ್ವಾಸ್ಥ್ಯ ಸಮಾಜಕ್ಕಾಗಿ ಲೋಕ್ ಅದಾಲತ್ ಸಹಕಾರಿಯಾಗಲಿದೆ ಎಂದು ಸಲಗ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷರಾದ ಮರೇನಹಳ್ಳಿ ಬಸವರಾಜ್ ಮಾತನಾಡಿ ಕಕ್ಷಿದಾರರು ರಾಜಿ ಮಾಡಿಕೊಳ್ಳಲು ಮುಂದೆ ಬಂದರೆ ವಕೀಲರು ಸಂಪೂರ್ಣ ಬೆಂಬಲಿಸಿ ಪ್ರಕರಣ ಗಳನ್ನು ಇತ್ಯರ್ಥ ಪಡಿಸಲು ಸಹಕಾರ ನೀಡುತ್ತಾರೆ ಲೋಕ್ ಅದಾಲತ್ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪ ಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆ.ಎಂ.ಎಪ್.ಸಿ ನ್ಯಾಯಾಧೀಶರಾದ ಆರ್.ಚೇತನ್.ಎಪಿಪಿ ಮಂಜುನಾಥ್ ವಕೀಲರ ತಾಲ್ಲೂಕು ಸಂಘದ ಕಾರ್ಯದರ್ಶಿ ಎ.ಪಿ.ಪರಶುರಾಮ್ ಹಿರಿಯ ವಕೀಲರಾದ ಹನುಮಂತಪ್ಪ.ಆರ್.ಓಬಳೇಶ್.ರುದ್ರೇಶ್. ಬಸವರಾಜಪ್ಪ.ಕರಿಬಸಪ್ಪ.ಪಾಟೀಲ್.ತಿಪ್ಪೇಸ್ವಾಮಿ. ಡಿ ವಿ ನಾಗಪ್ಪ.ಎಂ ಟಿ ತಿಪ್ಪೇಸ್ವಾಮಿ.ಶಿವಪ್ರಕಾಶ್ .ಲಕ್ಷ್ಮಣ್.ವಿ. ತಿಪ್ಪೇಸ್ವಾಮಿ.ಪ್ರಕಾಶ್.ಎಚ್.ಎಂ ಕರಿಬಸಯ್ಯ.ನಾಗೇಶ್ ಮರೇನಹಳ್ಳಿ ತಿಪ್ಪೇಸ್ವಾಮಿ.ಅಂಜಿನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.