ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ:ಜು.4:ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಜನರು ಹಲ್ಲೆ ಮಾಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ತಾಲ್ಲೂಕಿನ ಇಟಗಾ ಗ್ರಾಮದ ಹಿಂದೂ ಕಾರ್ಯಕರ್ತ ಭೀಮು ದಾಸರ್ ಅವರ ಮೇಲೆ ಅನ್ಯ ಕೋಮಿನ ಜನ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಜುಲೈ 1ರಂದು ತಾಲ್ಲೂಕಿನ ಇಟಗಾ(ಅ) ಗ್ರಾಮದಲ್ಲಿ ಮದುವೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶ್ರೀ ರಾಮನ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಿರುವ ಸಮಯದಲ್ಲಿ ಅನ್ಯ ಕೋಮಿನ ವ್ಯಕ್ತಿಗಳು ಹಿಂದೂ ಕಾರ್ಯಕರ್ತ ಭೀಮು ದಾಸರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ ಎಂದು ಅವರು ಹೇಳಿದರು.
ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಅನ್ಯ ಕೋಮಿನ ಜನರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತು ಹಿಂದೂ ಕಾರ್ಯಕರ್ತನ ಮೇಲೆ ಮಾಡಿರುವ ಹಲ್ಲೆಗೆ ಸೂಕ್ತ ಚಿಕ್ಸಿತೆ ಒದಗಿಸುವುದರ ಜೊತೆಗೆ ಅವರ ಕುಟುಂಬಕ್ಕೆ ಸೂಕ್ತ ಪೆÇಲೀಸ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹೇಶ್ ಗೊಬ್ಬೂರ್, ಅಂಬು ಕಂಬಾರಾಯ್, ರಾಕೇಶ್ ಜಮಾದಾರ್, ಸತ್ಯಪ್ರಮೋದ್ ನವಲೆ, ಗಂಗಾಧರ್ ಹಲಬಾ, ವಿಠ್ಠಲ್ ಕುಲಕರ್ಣಿ, ಗಿರೀಶ್ ಕುಲಕರ್ಣಿ, ನಾರಾಯಣ್ ಜಾಗೀರದಾರ್, ಪ್ರಜ್ವಲ್ ಮಾಲಿಪಾಟೀಲ್, ಪ್ರಜ್ವಲ್ ಕುಲಕರ್ಣಿ, ರಾಕೇಶ್ ಜಮಾದಾರ್, ಯಲ್ಲು ನಾಯಕ್, ಆಕಾಶ್ ಗೌಡರ್, ಅಂಬರೀಷ್ ಗುತ್ತೇದಾರ್, ಭೀಮಾಶಂಕರ್ ದಾಸರ್, ಆಕಾಶ್ ನಾಯಕ್, ಭೀಮಾಶಂಕರ್ ನಾಯಕ್, ಬಸವರಾಜ್ ನಾಯಕ್, ಸುವನ್ ಸಿದ್ಧಾರ್ಥ, ಯಶ್ವಂತ್ ಮಳ್ಳಿ ಮುಂತಾದವರು ಪಾಲ್ಗೊಂಡಿದ್ದರು.