ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿ ಶವ ಪತ್ತೆ
ಚಿಂಚೋಳಿ,ಜು.4-ತಾಲ್ಲೂಕಿನ ಪೋತಂಗಲ್ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯಡಗ ಗ್ರಾಮದ ಮಲ್ಲಪ್ಪ ತಂದೆ ಸಾಬಣ್ಣ ಅವರ ಶವ ಇಂದು ಪತ್ತೆಯಾಗಿದೆ.
ನಿನ್ನೆ ಪೋತಂಗಲ್ ಗ್ರಾಮದಿಂದ ನಾವದಗಿ ಗ್ರಾಮಕ್ಕೆ ಹೋಗುವಾಗ ನದಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರು. ನಿನ್ನೆಯಿಂದ ಮಲ್ಲಪ್ಪ ಅವರ ಶೋಧಕಾರ್ಯ ನಡೆಸಲಾಗಿತ್ತು. ಇಂದು ನಾವದಗಿ ಹತ್ತಿರ ಶವ ಪತ್ತೆಯಾಗಿದೆ.
ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಇಒ ಶಂಕರ ರಾಠೋಡ್, ಸುಲೇಪೇಟ ಪಿಎಸ್‍ಐ ನಂದಿನಿ, ಕಂದಾಯ ನಿರೀಕ್ಷಕರು, ಪಿಡಿಒ ಅವರು ಸ್ಥಳದಲ್ಲಿ ಹಾಜರಿದ್ದರು.