ಕೆಡಿಪಿ ಘಟನೆಗೆ ತೀವ್ರ ಖಂಡನೆ : ಬಸವರಾಜ ಆರ್ಯ
ಹುಮನಾಬಾದ್ :ಜು.4: ಇತ್ತೀಚೆಗೆ ಜರುಗಿದ ಕೆಡಿಪಿ ಸಭೆಯಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರು ವಯಕ್ತಿಕವಾಗಿ ಟೀಕಾ ಪ್ರಹಾರ ನಡೆಸಿರುವುದು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ಮುಖಂಡ ಬಸವರಾಜ ಆರ್ಯ ಹೇಳಿದರು.
ಪಟ್ಟಣದ ಶಾಸಕ ಡಾ. ಸಿದ್ದು ಪಾಟೀಲ್ ಅವರ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಭೆಯ ಅಧ್ಯಕ್ಷತೆ ಶಾಸಕರು ವಹಿಸಿರುತ್ತಾರೆ. ಹೀಗಾಗಿ ಸಭೆಯ ಸದಸ್ಯರು ಅಧ್ಯಕ್ಷರಿಗೆ
ಅಧ್ಯಕ್ಷರಿಗೆ ಆಗೌರವ ತೊರಿದರೆ, ಇಡೀ ಕ್ಷೇತ್ರದ ಜನರಿಗೆ ಆಗೌರವ ತೊರಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮಾಜಿ ಸಂಸದ ರಾಮಚಂದ್ರ ವೀರಪ್ಪ ಮಾಜಿ ಸಚಿವರಾದ ಬಸವರಾಜ ಪಾಟೀಲ್, ಮಿರಾಜೋದ್ದಿನ್ ಪಟೇಲ್ ಅವರು ಉತ್ತಮ ಯೋಜನೆಗಳನ್ನು ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹುಮನಬಾದ್ ಪಟ್ಟಣದ ಹೆಸರು ಬೆಳಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಕೊಂಡಾಡಿದರು. ಎಂದು ಜತೆಗೆ ಮಾಜಿ ಸಚಿವ ಗೌರವ ನೀಡಬೇಕು. ಸಭೆಯ ರಾಜಶೇಖರ ಪಾಟೀಲ್ ಅವರ ಆಡಳಿತ ಅವಧಿಯಲ್ಲಿ ನಡೆದ ಕೆಡಿಪಿ ಸಭೆಗಳಲ್ಲಿ ಇಂತಃ ಒಂದು ಸಣ್ಣ ಘಟನೆ ನಡೆದಿಲ್ಲ. ಹೀಗಾಗಿ ಹುಮನಾಬಾದ್ ಕ್ಷೇತ್ರಕ್ಕೆ ಉತ್ತಮ ಆಡಳಿತ ನೀಡಿದ ಪ್ರತಿಯೊಬ್ಬ ಜನಪ್ರತಿನಿಧಿಯ ಕುರಿತು ಶಾಸಕರು, ವಿಧಾನ ಪರಿಷತ್ ಸದಸ್ಯರು ಆತ್ಮವಲೋಕನ ಮಾಡಿಕೊಂಡು ಮುಂದಿನ ಕೆಡಿಪಿ ಸಭೆ ಹೋಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ ಪಸಾರ್ಗಿ, ಪ್ರಮುಖರಾದ ಗಿರೀಶ ತುಂಬಾ, ಶಿವರಾಜ ರಾಜೋಳೆ ಸೇರಿ ಅನೇಕರಿದ್ದರು.